ಜಿಲ್ಲೆ

ವಾಹನ ಸಮೇತ ಸಾಮಗ್ರಿ ಕದ್ದಿದ್ದವನ ಬಂಧನ

ಹುಬ್ಬಳ್ಳಿ: ವಾಹನ ಸಮೇತ ವಾಹನದಲ್ಲಿದ್ದ 15.50 ಲಕ್ಷ ರೂ. ಮೌಲ್ಯದ ಮನೆಯ ಸಾಮಗ್ರಿಗಳ ಕಳವು ಪ್ರಕರಣ ಭೇದಿಸುವಲ್ಲಿ ಇಲ್ಲಿಯ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ವಾಹನ ಸಮೇತ ಪರಾರಿಯಾಗಿದ್ದ ಕುಂದಗೋಳ ತಾಲೂಕು ರಾಮನಕೊಪ್ಪದ ವಿಠ್ಠಲ ಕುರಾಡಿ (27) ಬಂಧಿತ. ಬಂಧಿತನಿಂದ ಮಿನಿ ಗೂಡ್ಸ್ ವಾಹನ, ಮೂರು ಬೈಕ್, ಗೃಹ ಬಳಕೆಯ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಪಿಐ ಎಂ.ಎನ್. ಸಿಂಧೂರ, ಪಿಎಸ್‌ಐಗಳಾದ ಬಿ.ಎನ್. ಸಾತಣ್ಣವರ, ವಿಶ್ವನಾಥ ಆಲಮಟ್ಟಿ, ಸಿಬ್ಬಂದಿ ಪಿ.ಬಿ. ಕಾಳೆ, ನಾಗರಾಜ ಕೆಂಚಣ್ಣನವರ, ಬಸವರಾಜ ಚವ್ಹಾಣ ಸೇರಿದ ತಂಡವು ಈತನನ್ನು ಕಲಘಟಗಿ ತಾಲೂಕಿನ ಗಂಜಿಗಟ್ಟಿ ಗ್ರಾಮದಲ್ಲಿ ಪತ್ತೆ ಹಚ್ಚಿತ್ತು.