ಜಿಲ್ಲೆ

ಹುಂಡಿ ಹಣ ಕಳ್ಳತನ ಮಾಡಿದ್ದವನ ಬಂಧನ

ಶನಿವಾರಸಂತೆ : ಪಟ್ಟಣದ ತ್ಯಾಗರಾಜ ಕಾಲನಿಯಲ್ಲಿರುವ ಶ್ರೀವಿಜಯ ವಿನಾಯಕ ದೇವಾಲಯ ಮತ್ತು ಪಟ್ಟಣದ ಮುಖ್ಯರಸ್ತೆಯಲ್ಲಿರುವ ಶ್ರೀ ರಾಮಮಂದಿರ ದೇವಾಲಯಗಳಲ್ಲಿ ನಡೆದಿದ್ದ ಸರಣಿ ಹುಂಡಿ ಕಳ್ಳತನ ಪ್ರಕರಣ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಹಾಸನ ಮೂಲದ ಮುಬಾರಕ್ ಬಂಧಿತ.

ಕಳ್ಳತನ ಹಿನ್ನೆಲೆಯಲ್ಲಿ ದೇವಾಲಯ ಸಮಿತಿ ಪೊಲೀಸರಿಗೆ ದೂರು ನೀಡಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್, ಡಿವೈಎಸ್‌ಪಿ ಗಂಗಾಧರ್, ವೃತ್ತ ನಿರೀಕ್ಷಕ ರಾಜೇಶ್ ಕೋಟ್ಯಾನ್ ಮಾರ್ಗದರ್ಶನದಲ್ಲಿ ಆರೋಪಿಯನ್ನು ಬಂಧಿಸಲು ಕಾರ್ಯಾಚರಣೆಗೊಂಡಿದ್ದರು. ಅದರಂತೆ ಶನಿವಾರಸಂತೆ ಪೊಲೀಸ್ ಠಾಣಾಧಿಕಾರಿಗಳಾದ ಗೋವಿಂದ್‌ರಾಜ್ ಮತ್ತು ಚಂದ್ರು ನೇತೃತ್ವದಲ್ಲಿ ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧಕ್ಕೆ ಒಪ್ಪಿಸಲಾಗಿದೆ.