ವಿಜಯಪುರ ಪೊಲೀಸರು ವಶಕ್ಕೆ ಪಡೆದ ಪಿಸ್ತೂಲ್ ಮತ್ತಿತರ ಶಸ್ತ್ರಾಸ್ತ್ರಗಳನ್ನು ತೋರಿಸುತ್ತಿರುವ ಎಸ್ಪಿ ಎಚ್.ಡಿ.ಆನಂದಕುಮಾರ. ಎಎಸ್‌ಪಿ ರಾಮ ಅರಸಿದ್ದಿ, ಡಿವೈಎಸ್‌ಪಿ ಸಿದ್ಧೇಶ್ವರ ಮತ್ತಿತರರಿದ್ದರು. 
ಜಿಲ್ಲೆ

ಪಿಸ್ತೂಲ್ ಮಾರುವವರ ಬಂಧನ – ನಾಲ್ವರ ಬಂಧನ

ವಿಜಯಪುರ: ಶಸ್ತ್ರಾಸ್ತ್ರಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟು ಮಾರಾಟ ಮಾಡುತ್ತಿದ್ದ ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ವರನ್ನು ಬಂಧಿಸಿರುವ ಪೊಲೀಸರು ನಾಲ್ಕು ಪಿಸ್ತೂಲ್, ಐದು ಜೀವಂತ ಗುಂಡು ಹಾಗೂ ಮಚ್ ಮತ್ತಿತರ ಅಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ.

ನಗರದ ಜಮಖಂಡಿ ರಸ್ತೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ ಕಿರಣ ರೂಗಿ ಹಾಗೂ ಕಿರಣ ಗಾಯಕವಾಡನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿ, ಇವರಿಂದ 3 ಪಿಸ್ತೂಲ್, 4 ಜೀವಂತ ಗುಂಡು ಸಿಕ್ಕಿವೆ. ಇವುಗಳನ್ನು ಮಧ್ಯ ಪ್ರದೇಶದಿಂದ ತರಿಸಿಕೊಂಡಿದ್ದಾಗಿ ಆರೋಪಿಗಳು ತಿಳಿಸಿದ್ದಾರೆ ಎಂದು ಎಸ್‌ಪಿ ಎಚ್.ಡಿ.ಆನಂದಕುಮಾರ ಬುಧವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಇನ್ನೊಂದು ಪ್ರಕರಣದಲ್ಲಿ ಕಂಟ್ರಿ ಪಿಸ್ತೂಲ್, ಒಂದು ಜೀವಂತ ಗುಂಡು ಇರಿಸಿಕೊಂಡಿದ್ದ ಇಬ್ಬರನ್ನು ಬಂಧಿಸಲಾಗಿದೆ. ಸುರೇಶ ರಾಠೋಡ, ವಿಜಯ ಊರ್ಫ್ ಪಿಂಟೂ ರಾಠೋಡ ಬಂಧಿತರು. ಇವರಿಂದ ಒಂದು ಕಾರು, ಒಂದು ಲಾಂಗ್ ಕೂಡ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ ಎಸ್ಪಿ, ಪ್ರಕರಣವನ್ನು ಭೇದಿಸಿದ ಡಿವೈಎಸ್ಪಿ ಸಿದ್ಧೇಶ್ವರ ನೇತೃತ್ವದ ತಂಡವನ್ನು ಅಭಿನಂದಿಸಿದ್ದಾರೆ. ಎಎಸ್ಪಿ ಡಾ.ರಾಮ ಅರಸಿದ್ದಿ ಇದ್ದರು.