ಜಿಲ್ಲೆ

ಬೈಕ್‌ನಲ್ಲಿ ಮದ್ಯ ಸಾಗಿಸುತ್ತಿದ್ದವನ ಬಂಧನ

ಕೊಳ್ಳೇಗಾಲ: ಪಟ್ಟಣದ ಶ್ರೀಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ಬೈಕ್‌ನಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಮಾಲು ಸಮೇತ ಅಬಕಾರಿ ಪೊಲೀಸರು ಬಂಧಿಸಿದ್ದಾರೆ.


ತಾಲೂಕಿನ ಕುಣಗಳ್ಳಿ ಗ್ರಾಮದ ನಂಜುಂಡಶೆಟ್ಟಿ (56) ಬಂಧಿತ ಆರೋಪಿಯಾಗಿದ್ದಾನೆ. ಈತ ಪಟ್ಟಣದ ಸುಬ್ರಮಣ್ಯಸ್ವಾಮಿ ದೇವಾಲಯ ಮುಂಭಾಗದ ರಸ್ತೆಯಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದಾಗ ಗಸ್ತಿನಲ್ಲಿದ್ದ ಅಬಕಾರಿ ನಿರೀಕ್ಷಕಿ ವಿಜಯಲಕ್ಷ್ಮೀ ತಂಡ ಪರಿಶೀಲಿಸಿದ್ದು. ಈ ವೇಳೆ 6500 ರೂ. ಮೌಲ್ಯದ 9.900 ಲೀ.ಮದ್ಯ ಪತ್ತೆಯಾಗಿದ್ದು. ಆರೋಪಿಯನ್ನು ಮಾಲು ಸಮೇತ ವಶಕ್ಕೆ ಬಂಧಿಸಿದ್ದಾರೆ.


ಮದ್ಯ ಸಾಗಿಸುತ್ತಿದ್ದ ಬೈಕ್ ಜಪ್ತಿ ಮಾಡಲಾಗಿದೆ. ದಾಳಿಯಲ್ಲಿ ಅಬಕಾರಿ ಹೆಡ್ ಕಾನ್‌ಸ್ಟೆಬಲ್ ಎನ್.ಜಯಪ್ರಕಾಶ್, ಸುಂದ್ರಪ್ಪ, ರಮೇಶ, ಪ್ರದೀಪ್‌ಕುಮಾರ್ ಕಾನ್‌ಸ್ಟೆಬಲ್ ಸುಜನ್ ರಾಜ್ ಇದ್ದರು.