ಜಿಲ್ಲೆ

ಗಾಂಜಾ ಮಾರಾಟಗಾರರ ಬಂಧನ

ಕೋಲಾರ ಡೆಸ್ಕ್

ನರಸಾಪುರ: ಕೋಲಾರ ತಾಲೂಕಿನ ಬೆಳ್ಳೂರು ಗ್ರಾಮದ ಸಮೀಪ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಮಾಲು ಸಮೇತ ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಒರಿಸ್ಸಾ ಮೂಲದ ಅಜಿತ್​ ಕುಮಾರ್​ (26), ಅರುಣ್​ (26) ಬಂಧಿತರು.

ಅಬಕಾರಿ ಅಕಾರಿಗಳಿಗೆ ಬಂದ ಖಚಿತ ಮಾಹಿ ಮೇರೆಗೆ ಅಬಕಾರಿ ನಿರೀಕ್ಷಕ ರವೀಂದ್ರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದಾಗ 7.512 ಕೆಜಿ ಗಾಂಜಾವನ್ನು ದ್ವಿಚಕ್ರವಾನದಲ್ಲಿ ಇರಿಸಿಕೊಂಡು ಮಾರಾಟ ಮಾಡುತ್ತಿದ್ದದು ಪತ್ತೆಯಾಗಿದೆ. ಕೂಡಲೇ ಗಾಂಜಾ ಮಾರಾಟಗಾರನನ್ನು ಬಂಧಿಸಿ, ದ್ವಿಚಕ್ರವಾಹನ ವಶಪಡಿಸಿಕೊಂಡು ದೂರು ದಾಖಲಿಸಿದ್ದಾರೆ.

ದಾಳಿಯಲ್ಲಿ ಅಬಕಾರಿ ನಿರೀಕ್ಷಕ ಆರ್​.ರವೀಂದ್ರ, ಉಪ ನಿರೀಕ್ಷಕ ಜಯಣ್ಣ, ಪೇದೆ ಅಂಬರೀಷ್​ ಇದ್ದರು.