ಕೊಳ್ಳೇಗಾಲ: ಪಟ್ಟಣದ ಕೆಂಪನಪಾಳ್ಯ ಗ್ರಾಮದ ರಸ್ತೆಯಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ವ್ಯಕ್ತಿಯನ್ನು ಪಟ್ಟಣ ಪೊಲೀಸರು ಭಾನುವಾರ ವಶಕ್ಕೆ ಪಡೆದಿದ್ದಾರೆ.
ಕೆಂಪನಪಾಳ್ಯ ಗ್ರಾಮದ ಮಾರನಾಯಕ (54) ಆರೋಪಿ. ಕೆಂಪನಪಾಳ್ಯ ಗ್ರಾಮಕ್ಕೆ ಅಬಕಾರಿ ಕಾಯ್ದೆ ನಿಯಮ ಉಲ್ಲಂಘಿಸಿ ಅಕ್ರಮವಾಗಿ ಮದ್ಯ ಸಾಗಿಸುತ್ತಿರುವ ಮಾಹಿತಿ ಮೇರೆಗೆ ಪಿಎಸ್‌ಐ ಮಹೇಶ್ ನೇತೃತ್ವದ ತಂಡ ಕೆಂಪನಪಾಳ್ಯ ಗ್ರಾಮದ ಬಳಿ ದಾಳಿ ಮಾಡಿದ್ದು, ಮಾರನಾಯಕ ಅವರು ಕೆಂಪನಪಾಳ್ಯ ಕಡೆಗೆ ಪ್ಲ್ಯಾಸ್ಟಿಕ್ ಚೀಲ ಹೊತ್ತಿಕೊಂಡು ಬರುತ್ತಿದ್ದಾಗ ವಶಕ್ಕೆ ಪಡೆದಿದೆ. ಚೀಲವನ್ನು ಪರಿಶೀಲಿಸಿದಾಗ 90 ಎಂಎಲ್‌ನ 77 ಪೌಚ್‌ಗಳು, 180 ಎಂಎಲ್‌ನ 16 ಪೌಚ್‌ಗಳು ದೊರೆತಿವೆ. ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.