ರಾಯಚೂರು ತಾಲೂಕಿನ ಯರಗೇರಾ ಠಾಣೆ ವ್ಯಾಪ್ತಿಯ ಗ್ರಾಮಗಳಲ್ಲಿ ಜರುಗಿದ ಕಳ್ಳತನ ಪ್ರಕರಣದಲ್ಲಿ ಆರೋಪಿಗಳಿಂದ ವಶಪಡಿಸಿಕೊಳ್ಳಲಾದ ಹಣದೊಂದಿಗೆ ಸಿಪಿಐ ಎನ್.ನಿಂಗಪ್ಪ, ಪಿಎಸ್‌ಐಗಳಾದ ಅರುಣಕುಮಾರ ರಾಠೋಡ್, ಶಾಂತಮ್ಮ, ಪೇದೆಗಳಾದ ಚಾಂದಪಾಷಾ, ನಿಜಲಿಂಗಪ್ಪ ಇದ್ದಾರೆ. 
ಜಿಲ್ಲೆ

ಅಂತರ್ ರಾಜ್ಯ ಕಳ್ಳರ ಬಂಧನ

ರಾಚಯ್ಯ ಸ್ವಾಮಿ

ರಾಯಚೂರು: ತಾಲೂಕಿನ ಯರಗೇರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಲವಾರು ದಿನಗಳಿಂದ ನಡೆಯುತ್ತಿದ್ದ ಕಳ್ಳತನ ಪ್ರಕರಣಗಳನ್ನು ಬೇಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಆಂಧ್ರದ ಮೂಲದ ನಾಲ್ವರನ್ನು ಶುಕ್ರವಾರ ಬಂಸಿದ್ದಾರೆ.
ವಡವಾಟಿ ಗ್ರಾಮದಲ್ಲಿ ಜು.11ರಂದು 1.50 ಲಕ್ಷ ರೂ. ಬೆಲೆಬಾಳುವ 30 ಹಂದಿಗಳು, ದೇವನಪಲ್ಲಿ ಗ್ರಮದಲ್ಲಿ 4.80 ಲಕ್ಷ ರೂ. ವೌಲ್ಯದ ಟಿಪ್ಪರ್, ಗುಂಜಳ್ಳಿ ಗ್ರಾಮದಲ್ಲಿ ನಾಲ್ಕು ಆಕಳು ಕಳವು ಮಾಡಲಾಗಿತ್ತು. ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ಸಿಪಿಐ ಎನ್.ನಿಂಗಪ್ಪ ನೇತೃತ್ವದ ತಂಡ ಆಂಧ್ರ ಮೂಲದ ಕುಮಾರ್, ಶೀಲಂ ಗುರುಪ್ರಸಾದ, ಭೀಮೇಶ, ಮಲ್ಲೇಶ ಎಂಬುವವರನ್ನು ಬಂಸಿ 5.40 ಲಕ್ಷ ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ.
ದಾಳಿಯಲ್ಲಿ ಸಿಪಿಐ ಎನ್.ನಿಂಗಪ್ಪ, ಪಿಎಸ್‌ಐಗಳಾದ ಅರುಣಕುಮಾರ ರಾಠೋಡ್, ಶಾಂತಮ್ಮ, ಪೇದೆಗಳಾದ ಚಾಂದಪಾಷಾ, ನಿಜಲಿಂಗಪ್ಪ ಹಾಗೂ ಇನ್ನಿತರರಿದ್ದರು.