ಜಿಲ್ಲೆ

ಅಕ್ರಮವಾಗಿ ಮದ್ಯ ಮಾರಾಟ ಮಾಡುತಿದ್ದವನ ಬಂಧನ

ಅವಿನಾಶ್ ಜೈನಹಳ್ಳಿ

ಮೈಸೂರು: ಅಕ್ರಮವಾಗಿ ಮದ್ಯ ಮಾರಾಟ ಮಾಡುತಿದ್ದ ಟೀ ಅಂಗಡಿ ಮಾಲೀಕನನ್ನು ಬಂಧಿಸಿರುವ ಮೇಟಗಳ್ಳಿ ಠಾಣೆ ಪೊಲೀಸರು 10 ಟೆಟ್ರಾ ಪ್ಯಾಕ್ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ.

ಟೀ ಅಂಗಡಿ ಮಾಲೀಕ ಶಿವಕುಮಾರ್ ಬಂಧಿತ.

ಬಿಎಂಶ್ರೀ ನಗರದ ಬಳಿಯ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಕಾಂಪೌಡ್ ಪಕ್ಕದಲ್ಲಿನ ಟೀ ಮಾರಾಟ ಮಳಿಗೆಯಲ್ಲಿ ಯಾವುದೇ ರಹದಾರಿ ಇಲ್ಲದೆ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಈ ಸಂಬಂಧ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.