ವಿಜಯವಾಣಿ ಸುದ್ದಿಜಾಲ ಧಾರವಾಡ
ಹನಿಟ್ರ‍್ಯಾಪ್ ಮಾಡಿ ಲಕ್ಷಾಂತರ ರೂಪಾಯಿ ಸುಲಿಗೆ ಮಾಡಿದ್ದ ನಾಲ್ವರನ್ನು ವಿದ್ಯಾಗಿರಿ ಠಾಣೆ ಪೊಲೀಸರು ಬಂಽಸಿದ್ದಾರೆ ಎಂದು ಡಿಸಿಪಿ ಮಹಾನಿಂಗ ನಂದಗಾವಿ ತಿಳಿಸಿದರು.
ಇಲ್ಲಿನ ವಿದ್ಯಾಗಿರಿ ಠಾಣೆಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡ ನಿವಾಸಿಗಳಾದ ಆಕಾಶ ರವಿ ಉಪ್ಪಾರ, ರೇಣುಕಾ ಉರ್ಫ್ ರಿಯಾನಾ ಆಕಾಶ ಉಪ್ಪಾರ, ಹುಬ್ಬಳ್ಳಿಯ ಗಜಾಲಾಬಾನು ಉರ್ಫ್ ಅಂಜು ಉರ್ಫ್ ಪರ್ವೀನ್ ಬಶೀರ ನಗಾರಿ ಹಾಗೂ ಮಲ್ಲಿಕ್‌ಜಾನ್ ಮೆಹಬೂಬಸಾಬ ನದಾಫ ಬಂಧಿತ ಆರೋಪಿಗಳು ಎಂದರು.
ಹನಿಟ್ರ‍್ಯಾಪ್ ತಂಡದ ಇ¨್ಬರು ಮಹಿಳೆಯರು ಪುರುಷರನ್ನು ಮೊಬೈಲ್ ಮೂಲಕ ಸಂಪರ್ಕಿಸಿ ಸಲುಗೆ ಬೆಳೆಸಿ ತಮ್ಮ ಬಳಿ ಕರೆಯಿಸಿಕೊಳ್ಳುತ್ತಿದ್ದರು. ಇದೇರೀತಿ ರಾಯಚೂರು ಜಿಲ್ಲೆಯ ರೈತನೊನ್ನನನ್ನು ಗಜಾಲಾಬಾನು ಹಾಗೂ ರೇಣುಕಾ ಉಪ್ಪಾರ ಮೊಬೈಲ್ ಮೂಲಕ ಸಂಪರ್ಕಿಸಿದ್ದರು. ಆತನನ್ನು ಧಾರವಾಡಕ್ಕೆ ಕರೆಯಿಸಿಕೊಂಡು ಖಾಸಗಿ ಕ್ಷಣಗಳನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು. ಇವರಿಬ್ಬರೊಂದಿಗೆ ಮಲ್ಲಿಕ್‌ಜಾನ್ ಹಾಗೂ ಆಕಾಶ ಉಪ್ಪಾರ ಸೇರಿಕೊಂಡು ರೈತನಿಂದ ಲಕ್ಷಾಂತರ ರೂಪಾಯಿ ವಸೂಲಿ ಮಾಡಿದ್ದರು ಎಂದರು.
ನೊAದ ರೈತ ವಿದ್ಯಾಗಿರಿ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದ. ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದ ಪೊಲೀಸರು, ನಾಲ್ವರನ್ನು ಬಂಽಸಿದ್ದಾರೆ. ಅವರಿಂದ ಸ್ಕೋಡಾ ಕಾರು, 4 ಮೊಬೈಲ್, 5.50 ಲಕ್ಷ ರೂಪಾಯಿ ನಗದು, 6.63 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿಯ ಕಡಗ ಸೇರಿ 14.73 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.