ಆಂಧ್ರಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಬಂಧನ ಖಂಡಿಸಿ ರಾಯಚೂರಿನ ಜಿಲ್ಲಾಕಾರಿ ಕಚೇರಿ ಮುಂದೆ ತೆಲುಗು ಪೀಪಲ್ಸ್ ಸೊಸೈಟಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು. ಪದಾಕಾರಿಗಳಾದ ಬಿ.ಪ್ರಸಾದ, ರಾಮು ವೈಟ್ಲ, ಜಿ.ಶ್ರೀನಿವಾಸ, ಟಿ.ನಾಗೇಶ, ಟಿ.ಕಿಶೋರ, ರತ್ನಮಾಲಾ ಸುನಕಾರಾ, ಟಿ.ನಾಗೇಶರಾವ್, ಕೆ.ಆದಿನಾರಾಯಣ, ಪಿ.ಟಿ.ಆನಂದರಾವ್, ರವಿರಾಜ ಇಂದುಕೂರಿ, ಅಬ್ಬುಲುಗಾರು ಇದ್ದರು. 
ಜಿಲ್ಲೆ

ಕುತಂತ್ರದಿಂದ ಚಂದ್ರಬಾಬು ನಾಯ್ಡು ಬಂಧನ

ರಾಯಚೂರು: ಸುಳ್ಳು ಆರೋಪಗಳ ಆಧಾರದಲ್ಲಿ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಬಂಸಿರುವುದನ್ನು ಖಂಡಿಸಿ ಸ್ಥಳೀಯ ಜಿಲ್ಲಾಕಾರಿ ಕಚೇರಿ ಮುಂದೆ ತೆಲುಗು ಪೀಪಲ್ಸ್ ಸೊಸೈಟಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಕಾರಿ ಕಚೇರಿವರೆಗೆ ಮೆರವಣಿಗೆ ಮೂಲಕ ಆಗಮಿಸಿ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಿ, ಚಂದ್ರಬಾಬು ನಾಯ್ಡು ಬಂಧನ ಪ್ರಜಾಪ್ರಭುತ್ತ ವಿರೋ ನಡೆಯಾಗಿದೆ ಎಂದರು ದೂರಿದರು.
ಆಂಧ್ರದ ಸರ್ಕಾರ ಮತ್ತು ಪೊಲೀಸರು ಸಂಚು ರೂಪಿಸಿ ಸುಳ್ಳು ಆರೋಪದ ಆಧಾರದಲ್ಲಿ ಬಂಸಿದೆ. ಮುಂಬರುವ ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಅಲ್ಲಿನ ಸರ್ಕಾರ ಪಿತೂರಿ ನಡೆಸಿದ್ದು, ಜೈಲಿನಲ್ಲಿರುವ ಅವರ ಭದ್ರತೆ ಬಗ್ಗೆ ಆತಂಕ ಉಂಟಾಗಿದೆ.
ಆಂಧ್ರಪ್ರದೇಶದ ಅಭಿವೃದ್ಧಿಗೆ ಚಂದ್ರಬಾಬು ನಾಯ್ಡು ಕೊಡುಗೆ ಅಪಾರವಾಗಿದ್ದು, ರಾಜ್ಯ ವಿಭಜನೆ ಮುಂಚೆ ಹೈದರಾಬಾದ್‌ನನ್ನು ಹೈಟೆಕ್ ಸಿಟಿಯನ್ನಾಗಿ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಕುತಂತ್ರದಿಂದ ಅವರನ್ನು ಬಂಸಲಾಗಿದೆ.
ಕೂಡಲೇ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸುವ ಮೂಲಕ ಚಂದ್ರಬಾಬು ನಾಯ್ಡುಗೆ ಸೂಕ್ತ ರಕ್ಷಣೆ ನೀಡಬೇಕು. ಅವರನ್ನು ಬಿಡುಗಡೆಗೊಳಿಸಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಪ್ರತಿಭಟನೆಯಲ್ಲಿ ಸಂಘಟನೆ ಪದಾಕಾರಿಗಳಾದ ಬಿ.ಪ್ರಸಾದ, ರಾಮು ವೈಟ್ಲ, ಜಿ.ಶ್ರೀನಿವಾಸ, ಟಿ.ನಾಗೇಶ, ಟಿ.ಕಿಶೋರ, ರತ್ನಮಾಲಾ ಸುನಕಾರಾ, ಟಿ.ನಾಗೇಶರಾವ್, ಕೆ.ಆದಿನಾರಾಯಣ, ಪಿ.ಟಿ.ಆನಂದರಾವ್, ರವಿರಾಜ ಇಂದುಕೂರಿ, ಅಬ್ಬುಲುಗಾರು ಹಾಗೂ ಅನೇಕ ಮಹಿಳೆಯರು ಪಾಲ್ಗೊಂಡಿದ್ದರು.