ತಾಲೂಕಿನ ಒಸ್ಸೂರು ಎಸ್ಟೇಟ್‌ನಲ್ಲಿ ಕಾಡೆಮ್ಮ ಬೇಟೆಗಾರರನ್ನು ಸಕಲೇಶಪುರ ವಲಯ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. 
ಜಿಲ್ಲೆ

ಕಾಡೆಮ್ಮೆ ಬೇಟೆಗಾರರ ಬಂಧನ

ನಾಗೇಶ ಎಸ್

ಸಕಲೇಶಪುರ: ಕಾಡೆಮ್ಮೆಯನ್ನು ಬೇಟೆಯಾಡಿದ್ದ ಇಬ್ಬರನ್ನು ತಾಲೂಕಿನ ಒಸ್ಸೂರು ಎಸ್ಟೇಟ್‌ನಲ್ಲಿ ಸಕಲೇಶಪುರ ವಲಯ ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ. ನಾಲ್ವರು ಪರಾರಿಯಾಗಿದ್ದಾರೆ.

ಒಸ್ಸೂರು ಎಸ್ಟೇಟ್‌ನಲ್ಲಿ ಕಾಡೆಮ್ಮೆ ಬೇಟೆ ಬಗ್ಗೆ ಖಚಿತ ಮಾಹಿತಿ ಆಧಾರಿಸಿ ಸೋಮವಾರ ದಾಳಿ ನಡೆಸಿದ ವಲಯ ಅರಣ್ಯಾಧಿಕಾರಿ ಶಿಲ್ಪಾ ನೇತೃತ್ವದ ಅರಣ್ಯ ಇಲಾಖೆ ಅಧಿಕಾರಿಗಳು, ಕಾಡೆಮ್ಮೆ ತಲೆ, ಮಾಂಸದ ತುಂಡುಗಳನ್ನು ಪತ್ತೆ ಮಾಡಿ ಒಸ್ಸೂರು ಎಸ್ಟೇಟ್ ಕೆಲಸಗಾರರಾದ ರವಿ, ಉಮೇಶ್ ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ. ಆರೊಪಿಗಳಾದ ಆಕಾಶ್, ಅಜೀಜ್, ಸೋಮಣ್ಣ, ಇಕ್ಕಿಲ್‌ಲ್ ತಲೆ ಮರೆಸಿಕೊಂಡಿದ್ದಾರೆ. ಬಂಧಿತರಿಗೆ ನ್ಯಾಯಾಲಯ ಜಾಮೀನು ನೀಡಿದೆ.