ಜಿಲ್ಲೆ

ಮಾರಕಾಸ್ತ್ರ ಇಟ್ಟುಕೊಂಡಿದ್ದ ಯುವಕನ ಬಂಧನ

ಹುಬ್ಬಳ್ಳಿ: ಸಮೀಪದ ಅಮರಗೋಳ ಎಪಿಎಂಸಿ ಯಾರ್ಡ್‌ನಲ್ಲಿ ಟಾಟಾ ಇಂಟ್ರಾ ಗೂಡ್ಸ್ ವಾಹನದಲ್ಲಿ ಮಾರಕಾಸ್ತ್ರ ಇಟ್ಟುಕೊಂಡು ಸಂಚರಿಸುತ್ತಿದ್ದ ಯುವಕನನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.
ರಾಯಾಪುರದ ತಿಪ್ಪಣ್ಣ ಶಿಶನಳ್ಳಿ (25) ಬಂಧಿತ.
ಖಚಿತ ಮಾಹಿತಿ ಮೇರೆಗೆ ಪೊಲೀಸ್ ಇನ್‌ಸ್ಪೆಕ್ಟರ್ ಕೆ. ಸಮೀವುಲ್ಲಾ ನೇತೃತ್ವದ ತಂಡ ದಾಳಿ ನಡೆಸಿ, ಪರಿಶೀಲನೆ ವೇಳೆ ವಾಹನದಲ್ಲಿ ತಲವಾರ್ ಇರುವುದು ಕಂಡುಬಂದಿದೆ. ಮಾರಾಕಸ್ತ್ರ ವಶಕಪಡಿಸಿಕೊಂಡಿರುವ ತಂಡವು, ಯುವಕನನ್ನು ಶಸ್ತ್ರಾಸ್ತ್ರ ಕಾಯ್ದೆ ಪ್ರಕಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.