ಜಿಲ್ಲೆ

ಗಾಂಜಾ ಸೇವಿಸುತ್ತಿದ್ದ ಯುವಕನ ಬಂಧನ

ಕಾಸರಗೋಡು: ಬದಿಯಡ್ಕ ಪೇಟೆಯಲ್ಲಿ ಗಾಂಜಾ ಸೇವಿಸುತ್ತಿದ್ದ ನೀರ್ಚಾಲು ಮೆಣಸಿನಪಾರೆ ನಿವಾಸಿ ರಫೀಕ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ನೀರ್ಚಾಲು ಆಸುಪಾಸಿನ ಯುವಕರಿಗೆ ಹಾಗೂ ಇತರ ರಾಜ್ಯ ಕಾರ್ಮಿಕರಿಗೆ ಗಾಂಜಾ ಪೂರೈಸುವ ಪ್ರಮುಖ ಏಜೆಂಟ್ ಆಗಿದ್ದಾನೆ. ತಿಂಗಳ ಹಿಂದೆ ಸೀತಾಂಗೋಳಿ ಪೇಟೆಯಲ್ಲಿ ಸ್ಕೂಟರಲ್ಲಿ ಗಾಂಜಾ ಸಾಗಿಸುತ್ತಿದ್ದ ಈತನನ್ನು ಕಾಸರಗೋಡು ಸರ್ಕಲ್ ಅಬಕಾರಿ ದಳ ಸಿಬ್ಬಂದಿ ಬಂಧಿಸಿರುವುದಾಗಿಯೂ ಪೊಲೀಸರು ತಿಳಿಸಿದ್ದಾರೆ.