ಜಿಲ್ಲೆ

ಮದ್ಯ ಅಕ್ರಮ ಸಾಗಾಟ ಮಾಡುತ್ತಿದ್ದವನ ಬಂಧನ

ಯಳಂದೂರು: ಮದ್ಯ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಯಳಂದೂರು ಪೊಲೀಸರು ಶನಿವಾರ ರಾತ್ರಿ ಬಂಧಿಸಿದ್ದಾರೆ.


ತಾಲೂಕಿನ ದಾಸನಹುಂಡಿ ಗ್ರಾಮದ ಕೃಷ್ಣೇಗೌಡ ಎಂಬಾತ ಮಾರಾಟ ಮಾಡಲು ಮದ್ಯ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಪೊಲೀಸರು ಪಟ್ಟಣದ ಬಳೇಪೇಟೆಯ ಕೆರೆಯ ಬಳಿ ದಾಳಿ ನಡೆಸಿದ್ದಾರೆ. ಅಂದಾಜು 6,751 ರೂ. ಮೌಲ್ಯದ 15 ಲೀ. ಮದ್ಯ ವಶಕ್ಕೆ ಪಡೆಯಲಾಗಿದೆ. ಕಾರ್ಯಾಚರಣೆಯಲ್ಲಿ ಪಿಎಸ್‌ಐ ನಂದೀಶ್, ಸಿಬ್ಬಂದಿ ನಾಗೇಂದ್ರ, ರಾಮಶೆಟ್ಟಿ ಇತರರು ಭಾಗವಹಿಸಿದ್ದರು.