ಎಚ್.ಡಿ.ಕೋಟೆ ಪಟ್ಟಣದ ಕನಕ ಭವನದ ಹತ್ತಿರ ಒಣ ಗಾಂಜಾ ಸೊಪ್ಪು ಮಾರಾಟ ಮಾಡುತ್ತಿದ್ದ ವ್ಯಕ್ತಿ ಹಾಗೂ ಮಾರಾಟಕ್ಕೆ ಬಳಕೆ ಮಾಡಿಕೊಂಡಿದ್ದ ಪ್ಯಾಸೆಂಜರ್ ಆಟೋ ಸಮೇತ ಪಟ್ಟಣ ಪೊಲೀಸರು ದಾಳಿ ಮಾಡಿ ವಶಕ್ಕೆ ಪಡೆದರು. 
ಜಿಲ್ಲೆ

ಗಾಂಜಾ ಸೊಪ್ಪು ಮಾರುತ್ತಿದ್ದವನ ಬಂಧನ

ಎಚ್.ಡಿ.ಕೋಟೆ: ಪಟ್ಟಣದಲ್ಲಿ ಒಣ ಗಾಂಜಾ ಸೊಪ್ಪು ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಶನಿವಾರ ಪೊಲೀಸರು ದಾಳಿ ಮಾಡಿ ಸೊಪ್ಪು ಮತ್ತು ಪ್ಯಾಸೆಂಜರ್ ಆಟೋ ವಶಕ್ಕೆ ಪಡೆದರು.

ಪಟ್ಟಣದ ನಿವಾಸಿ ದೇವರಾಜುಕುಮಾರ್ (ಅಪ್ಪುಕುಮಾರ್) ಬಂಧಿತ ಆರೋಪಿ. 20 ಸಾವಿರ ರೂ. ಬೆಲೆ ಬಾಳುವ 175 ಗ್ರಾಂ ಗಾಂಜಾ ಸೊಪ್ಪನ್ನು ಬಿಡಿಬಿಡಿಯಾಗಿ ಪ್ಯಾಕ್ ಮಾಡಿ ಮಾರಾಟ ಮಾಡುತ್ತಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಎಚ್.ಡಿ.ಕೋಟೆ ಪೊಲೀಸ್ ಇನ್‌ಸ್ಪೆಕ್ಟರ್ ಗಂಗಾಧರ್ ನೇತೃತ್ವದಲ್ಲಿ ಸಬ್ ಇನ್‌ಸ್ಪೆಕ್ಟರ್ ಚಿಕ್ಕನಾಯಕ ಹಾಗೂ ಸಿಬ್ಬಂದಿ ದಾಳಿ ಮಾಡಿ ಆರೋಪಿ ಮತ್ತು ಮಾಲನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ದಾಳಿ ವೇಳೆ ಪೊಲೀಸ್ ಸಿಬ್ಬಂದಿ ಸೈಯದ್ ಕಬೀರ್, ಯೋಗೇಶ್, ಮೋಹನ್, ಮಹೇಶ್, ಮಹಾದೇವ, ನಾಗರಾಜು ಇದ್ದರು.