ಜಿಲ್ಲೆ

ಗಾಂಜಾ ಬೆಳೆದಿದ್ದವನ ಬಂಧನ

Mysuru - Desk - Naveen Kumar H P

ಚಾಮರಾಜನಗರ : ಹನೂರು ತಾಲೂಕಿನ ಮಂಚಾಪುರ ಗ್ರಾಮದಲ್ಲಿ ಅರಿಶಿಣ ಬೆಳೆಯ ನಡುವೆ ಗಾಂಜಾ ಬೆಳೆದಿದ್ದ ಆರೋಪಿಯನ್ನು ರಾಮಾಪುರ ಪೊಲೀಸರು ಶನಿವಾರ ಬಂಧಿಸಿದ್ದಾರೆ.


ಗ್ರಾಮದ ವೀರಸ್ವಾಮಿ (55) ಬಂಧಿತ. ಅರಿಶಿಣ ಬೆಳೆಯ ಮಧ್ಯೆ ಗಾಂಜಾವನ್ನು ಬೆಳೆದಿದ್ದ. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಡಿವೈಎಸ್ಪಿ ಸೋಮೇಗೌಡ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್ ಸಂತೋಷ್ ಕಶ್ಯಪ್, ಸಬ್ ಇನ್ಸ್‌ಪೆಕ್ಟರ್ ಲೋಕೇಶ್ ಹಾಗೂ ಸಿಬ್ಬಂದಿ ತಂಡ ದಾಳಿ ನಡೆಸಿ ಪರಿಶೀಲಿಸಿತು. ಈ ವೇಳೆ ಗಾಂಜಾ ಬೆಳೆದಿರುವುದು ದೃಢಪಟ್ಟಿದ್ದು, ಅಲ್ಲಿದ್ದ 3.400 ಕೆ.ಜಿ ತೂಕವುಳ್ಳ ಗಾಂಜಾ ಗಿಡವನ್ನು ವಶಪಡಿಸಿಕೊಂಡು, ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.


ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿ ಸಿದ್ದೇಶ್, ದಿನೇಶ್, ಲಿಯಾಖತ್ ಆಲಿಖಾನ್, ಬಿರಾದಾರ್, ಗಿರೀಶ್ ಹಾಗೂ ಮಹೇಂದ್ರ ಇದ್ದರು.