ಜಿಲ್ಲೆ

ಮನೆಗಳ್ಳತನ ಮಾಡುತ್ತಿದ್ದವನ ಬಂಧನ

ಮರಿದೇವ ಹೂಗಾರ

ಹುಬ್ಬಳ್ಳಿ: ಗೋವಾ ಸೇರಿ ವಿವಿಧೆಡೆ ಮನೆಗಳ್ಳತನ ಮಾಡಿದ್ದ ಆರೋಪಿಯನ್ನು ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದು, 2 ತೊಲೆ ಚಿನ್ನಾಭರಣ, ಬೈಕ್ ವಶಪಡಿಸಿಕೊಂಡಿದ್ದಾರೆ.

ದಕ್ಷಿಣ ಗೋವಾದ, ಇಲ್ಲಿಯ ಈಶ್ವರನಗರದಲ್ಲಿ ವಾಸವಾಗಿದ್ದ ಗೇಬಿ ಫರ್ನಾಂಡಿಸ್ ಎಂಬಾತ ಬಂಧಿತ. ಇತ್ತೀಚೆಗೆ ತಾರಿಹಾಳದಲ್ಲಿ ಮನೆ ಕೀಲಿ ಮುರಿದು ಕಳವು ಮಾಡಿದ್ದರ ಕುರಿತು ಪ್ರಕರಣ ದಾಖಲಾಗಿತ್ತು. ಬೆನ್ನತ್ತಿ ಪರಿಶೀಲನೆ ಮಾಡಿದ ಪೊಲೀಸರು ಈಶ್ವರ ನಗರದಲ್ಲಿದ್ದ ಆರೋಪಿಯನ್ನು ಬಂಧಿಸಿದ್ದಾರೆ.