ಯಲ್ಲಾಪುರ: ತಾಲೂಕಿನ ಕೊಡಸೆ ಗ್ರಾಮದ ಕನ್ನಡಗಲ್ ಸಮೀಪದ ಅರಣ್ಯದಲ್ಲಿ ಜುಗಾರಾಡುತ್ತಿದ್ದ 6 ಜನರನ್ನು ಪೊಲೀಸರು ಬಂಧಿಸಿ, ಸಾಮಗ್ರಿ ವಶಕ್ಕೆ ಪಡೆದಿದ್ದಾರೆ.
ನೂತನನಗರ ಜಡ್ಡಿಯ ರಜತ ಜಗದೀಶ್ಚಂದ್ರ ನಾಯ್ಕರ್, ಹುಬ್ಬಳ್ಳಿಯ ರಮೇಶ ಬಸಪ್ಪ ಪಾಟೀಲ, ಯಲ್ಲಾಪುರ ಬಿಲಾಲ್ ಮಸೀದಿ ಪಕ್ಕದ ನಿವಾಸಿ ಮಹಮ್ಮದ್ ಹುಸೇನ್ ಅಬ್ದುಲ್ಸಾಬ್ ಗೋಕಾಕ, ದಾಂಡೇಲಿಯ ರಹೀಂಖಾನ್ ವಾಲಿಖಾನ್ ಪಠಾಣ, ಬಾಬು ರಾಮಪ್ಪ ದೊಡ್ಮನಿ ಹಾಗೂ ಹಳಿಯಾಳ ಭಾಗವತಿಯ ಅರ್ಜುನ್ ರಾಮಸಿಂಗ್ ಭೋವಿ ಬಂಧಿತರು.
ಇವರ ಜೊತೆಗಿದ್ದ ಮಂಜುನಾಥ ನಗರದ ಮಂಜುನಾಥ ಗೋಪಾಲ ನಾಯ್ಕ, ಗಣಪತಿಗಲ್ಲಿಯ ಮಂಜುನಾಥ ಅರ್ಜುನ ರಾವ್, ವಜ್ರಳ್ಳಿಯ ಜಿಕ್ರಿಯಾ ಮುಲ್ಲಾ, ನೂತನನಗರದ ಪ್ರಕಾಶ ಮಾರುತಿ ರಾವೋಜಿ, ಶಾರದಾಗಲ್ಲಿಯ ರಘು ಕಾಳಪ್ಪ ಮಹಾಲೆ, ಇಡಗುಂದಿಯ ವಿದ್ಯಾಧರ ಬಾಂದೇಕರ್, ರವೀಂದ್ರನಗರದ ಮಂಜುನಾಥ ಬೂದಪ್ಪ ಬೋಳು ಪೊಲೀಸರು ದಾಳಿ ಮಾಡುತ್ತಿದ್ದಂತೆ ಪರಾರಿಯಾಗಿದ್ದಾರೆ.
ಬಂಧಿತರಿಂದ 8,800 ರೂ. ನಗದು ಹಾಗೂ ಜುಗಾರಾಟದ ಸಾಮಗ್ರಿ ವಶಪಡಿಸಿಕೊಂಡಿರುವ ಪೊಲೀಸರು, ನಾಪತ್ತೆಯಾದ 7 ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.