ಕೊಳ್ಳೇಗಾಲ: ತಾಲೂಕಿನ ಮಧುವನಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಶ್ರೀ ಸಿದ್ದೇಶ್ವರ ಬೆಟ್ಟದ ರಸ್ತೆಯ ಬಳಿಯಿರುವ ಸಾರ್ವಜನಿಕ ಸ್ಥಳದಲ್ಲಿ ಜೂಜಾಡುತ್ತಿದ್ದ 14 ಜನರನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದು ಪಣಕ್ಕಿಟ್ಟಿದ್ದ 1,01,680 ರೂ. ವಶಕ್ಕೆ ಪಡೆದಿದ್ದಾರೆ.
ಚಾಮರಾಜನಗರ ತಾಲೂಕಿನ ದೊಡ್ಡಮೋಳೆ ಗ್ರಾಮದ ಅಣ್ಣಪ್ಪ (33), ಕಾಗಲವಾಡಿ ವಿನಯ್ (32), ಮಸಣಾಪುರ ಅಶ್ವತ್ಥ (56), ರಾಜ ಶೆಟ್ಟಿ (44), ಮೊಹಮ್ಮದ್ ಇಫ್ತೀಯಾಜ್ (36), ರಾಮಸಮುದ್ರ ದುಂಡು ಮಾದೇವ (43), ಚಾಮರಾಜನಗರ ಪಟ್ಟಣದ ಸುರೇಶ್ (40), ಸಮಾಜವಾದಿ ನಾರಾಯಣಸ್ವಾಮಿ (32), ಮಾದೇವಸ್ವಾಮಿ (48), ಪುತ್ತನಪುರ ಪ್ರಸನ್ನ (31), ಗುಂಡ್ಲುಪೇಟೆ ತಾಲೂಕಿನ ಹೊಸೂರು ಗ್ರಾಮದ ನಾಗರಾಜು (48) ಮದುವನಹಳ್ಳಿ ಗ್ರಾಮದ ಸಿದ್ದಪ್ಪಸ್ವಾಮಿ (42), ಮಾದೇವಸ್ವಾಮಿ (36), ಮಹ ದೇವಪ್ರಸಾದ್ (33) ಬಂಧಿತರು.
ಇವರು ಅಕ್ರಮವಾಗಿ ಜೂಜಾಡುತ್ತಿದ್ದ ನಿಖರವಾದ ಮಾಹಿತಿ ಆಧಾರದ ಮೇಲೆ ಗುರುವಾರ ಮುಂಜಾನೆ ಮೂರು ಗಂಟೆ ಸುಮಾರಿನಲ್ಲಿ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಸುಪ್ರೀತ್ ಮತ್ತು ತಂಡದವರು ಜೂಜಾಡುತ್ತಿದ್ದವರನ್ನು ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆ ಸಿಬ್ಬಂದಿ ರಂಗಸ್ವಾಮಿ, ಮಾದೇವಸ್ವಾಮಿ, ಲಿಂಗರಾಜು ಭಾಗವಹಿಸಿದ್ದರು.