ಜಿಲ್ಲೆ

ಪೊಲೀಸ್ ಕುಟುಂಬ ದೋಚಿದ್ದವರು ಅರೆಸ್ಟ್

ಚನ್ನಪಟ್ಟಣ

ತಮಿಳುನಾಡಿನ ಪೊಲೀಸ್ ಅಧಿಕಾರಿ ಕುಟುಂಬವನ್ನು ದರೋಡೆ ಮಾಡಿದ ಮೂವರು ದರೋಡೆಕೋರರ ಎಡೆಮೂರಿ ಕಟ್ಟುವಲ್ಲಿ ಇಲ್ಲಿನ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.

ಚನ್ನಪಟ್ಟಣ ನಗರದ ಸೈಯದ್ ವಾಡಿಯ ಸೈಯದ್ ತನ್ವೀರ್, ರಾಮನಗರ ನಿವಾಸಿಗಳಾದ ಫೈರೋಜ್ ಪಾಷಾ, ತನ್ವೀರ್ ಪಾಷಾ ಬಂಧಿತ ದರೋಡೆಕೋರರು. ದರೋಡೆ ಮಾಡಿ ತಲೆಮರಿಸಿಕೊಂಡಿದ್ದ, ಈ ಮೂವರು ಆರೋಪಿಗಳನ್ನು ವಶಕ್ಕೆ ಪಡೆದ ಗ್ರಾಮಾಂತರ ಪೊಲೀಸರು, ಕೃತ್ಯಕ್ಕೆ ಬಳಸಿದ ಒಂದು ದ್ವಿಚಕ್ರ ವಾಹನ, ಮಾರಕಾಸ್ತ್ರಗಳು ಹಾಗೂ ಚಿನ್ನದ ಚೈನು ಸೇರಿದಂತೆ ಮೊಬೈಲ್ ಪೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಪೊಲೀಸ್ ಕುಟುಂಬವನ್ನು ದೋಚಿದ್ದರು!

ತಾಲೂಕಿನ ಲಂಬಾಣಿ ತಾಂಡ್ಯ ಗ್ರಾಮದ ಹತ್ತಿರದ ಬೆಂಗಳೂರು ‌ಮೈಸೂರು ಎಕ್ಸ್ಪ್ರೆಸ್ ಹೈವೇಯಲ್ಲಿ‌  ಕಳೆದ ೭ ರಂದು ಈ ಮೂವರು ನಿಲ್ಲಿಸಿದ ಕಾರಿನಲ್ಲಿದ್ದ ತಮಿಳುನಾಡು ಮೂಲದ ಪೊಲೀಸ್ ಅಧಿಕಾರಿ ಶಾಜಿ ಮತ್ತು ಅವರ ಕುಟುಂಬದವರಿಗೆ ಮಚ್ಚು ತೋರಿಸಿ, ಅವರ ಬಳಿಯಿಂದ ಚಿನ್ನದ ಚೈನು, ನಗದು ಹಾಗೂ ಮೊಬೈಲ್ ಪೋನ್ ಗಳನ್ನು ಕಿತ್ತುಕೊಂಡು ಹೋಗಿದ್ದರು. ಈ ಬಗ್ಗೆ ಅಧಿಕಾರಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದರು.

ಈ ಪ್ರಕರಣವನ್ನು ಬೆನ್ನಟಿದ್ದ ಗ್ರಾಮಾಂತರ ಸಿಪಿಐ ಬಿ ಕೆ ಪ್ರಕಾಶ್, ಗ್ರಾಮಾಂತರ ಪಿಎಸ್ಐ ಮನೋಹರ್,  ಪ್ರೊಫೆಷನರಿ ಪಿಎಸ್ಐಗಳಾಸ ಅಜಯ್ ಗೌಡ ಮತ್ತು  ಪ್ರಜ್ವಲ್ ಹಾಗೂ ಸಿಬ್ಬಂದಿಗಳಾದ ಶಿವಕುಮಾರ್, ಹನುಮಂತಶೆಟ್ಟಿ,  ಶಿವು, ಪವನ್ ಕುಮಾರ್, ಪ್ರವೀಣ್ ಮತ್ತು ಜಿಲ್ಲಾ ತಾಂತ್ರಿಕ ವಿಭಾಗದ ಮಹಾದೇವ್ ತಂಡ ಆರೋಪಿಗಳ ಎಡೆಮೂರಿ ಕಟ್ಟಿದ್ದಾರೆ.