ಜಿಲ್ಲೆ

ರಾಯಣ್ಣನ ಪ್ರತಿಮೆ ಭಗ್ನಗೊಳಿಸಿದ್ದ ಆರೋಪಿ ಬಂಧನ

ಎ. ಆರ್. ರಘುರಾಮ

ಕೆ.ಆರ್. ಪೇಟೆ : ಅಕ್ಕಿಹೆಬ್ಬಾಳು ಹೋಬಳಿ ಬೀಕನಹಳ್ಳಿ ಗ್ರಾಮದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿರಾಯಣ್ಣನ ಪ್ರತಿಮೆಯನ್ನು ಭಗ್ನಗೊಳಿಸಿದ್ದ ಆರೋಪಿಯನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗ್ರಾಮದ ಮೋಹನ ಬಿನ್‌ಅಣ್ಣೇಗೌಡ ಬಂಧಿತ. ಈತ ಕಳೆದ ಬುಧವಾರ ಪ್ರತಿಮೆಯ ಖಡ್ಗ, ಪಟ್ಟಿ ಮತ್ತು ಪಾದವನ್ನು ಮುರಿದು ಪರಾರಿಯಾಗಿದ್ದ. ಕುರುಬ ಸಮುದಾಯದ ಮುಖಂಡರು ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟಿಸಿ, ದುಷ್ಕರ್ಮಿಯನ್ನು ಬಂಧಿಸಲು ಆಗ್ರಹಿಸಿದ್ದರು. ಪೋಲಿಸರು ಬೆರಳಚ್ಚು ತಜ್ಞರು ಮತ್ತು ಶ್ವಾನದಿಂದ ಸ್ಥಳ ಪರಿಶೀಲನೆ ನಡೆಸಿದರು. ಶ್ವಾನ ಗ್ರಾಮದ ಮೋಹನನ ಮನೆಗೆ ಮನೆ ಬಳಿ ಹೋಗಿ ಸುಳಿವು ನೀಡಿತು.ತಪ್ಪೊಪ್ಪಿಕೊಂಡಿದ್ದಾನೆ. ಪೊಲೀಸರು ಆತತನ್ನು ಬಂಧಿಸಿ ಪ್ರಕರಣ ದಾಖಲಿಸಿದಾಗ ತಪ್ಪೊಪ್ಪಿಕೊಂಡಿದ್ದಾನೆ.ಈತ ಬೆಂಗಳೂರಿನ ಹೋಟೆಲ್ ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದಾನೆ. ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣರ ಪ್ರತಿಮೆ ಸ್ಥಾಪನೆ ಮಾಡಿದ ಸಂದರ್ಭ
ಈತನನ್ನು ಗ್ರಾಮಸ್ಥರು ಕಡೆಗಣಿಸಿದ್ದರು ಎಂದು ಬೇಸರಗೊಂಡಿದ್ದ. ಕಳೆದ ಬುಧವಾರ ಊರಿಗೆ ಬಂದಾಗ ಮದ್ಯಪಾನ ಮಾಡಿ ಪ್ರತಿಮೆಯನ್ನು ವಿರೂಪಗೊಳಿಸಿದ್ದಾಗಿ ವಿವರಿಸಿದ. ತನಿಖಾ ತಂಡದಲ್ಲಿ ಗ್ರಾಮಾಂತರ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಆನಂದೇಗೌಡ , ಎಸ್ಸೈ ಸುಬ್ಬಯ್ಯ, ತನಿಖಾ ಸಹಾಯಕರಾದ ವೈರಮುಡಿ, ಜಯವರ್ಧನ ಇತರರು ಇದ್ದರು.