ಕಲಬುರಗಿ: ನಗರದ ಬಿಲಗುಂದಿ ಪೆಟ್ರೋಲ್ ಪಂಪ್ ಹತ್ತಿರ ಒಬ್ಬಂಟಿಯಾಗಿ ನಡೆದುಹೋಗುತ್ತಿದ್ದ ಮಹಿಳೆಯ ಚಸ್ಮಾ ಮುರಿದು, ಮೊಬೈಲ್ ಕಿತ್ತುಕೊಂಡು ಹೋಗಿದ್ದ ಸುಲಿಗೆಕೋರನನ್ನು ನಗರದ ಎಂಬಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶಹಾಬಾದ್ದ ಅಸ್ಮಾಖಾನ್ ಅವರು ಮೇ ೨೧ರಂದು ಮಧ್ಯಾಹ್ನ ೪.೩೦ಕ್ಕೆ ಬಿಲಗುಂದಿ ಪೆಟ್ರೋಲ್ ಪಂಪ್ ಹತ್ತಿರ ನಡೆದು ಹೋಗುವ ವೇಳೆ ತಡೆದು ನಿಲ್ಲಿಸಿ, ಚಸ್ಮಾ ಒಡೆದು ಹಾಕಿ, ಮೊಬೈಲ್ ಕಿತ್ತುಕೊಂಡು ಹೋಗಲಾಗಿತ್ತು. ಈ ಕುರಿತು ಅಸ್ಮಾಖಾನ್ ದೂರು ನೀಡಿದ್ದರು. ತನಿಖೆ ಬೆನ್ನು ಹತ್ತಿದ್ದ ಪೊಲೀಸರು ನಗರದ ಮಿಲ್ಲತ್ ನಗರದ ಮಹ್ಮದ್ ಅಬ್ಬಾಸ್ನನ್ನು ಬಂಧಿಸಿದ್ದಾರೆ. ಬಂಧಿತನಿಂದ ಮೊಬೈಲ್ ಜಪ್ತಿ ಮಾಡಿಕೊಂಡಿದ್ದಾರೆ. ಪಿಐ ಶಿವಾನಂದ ವಾಲಿಕರ್, ಪಿಎಸ್ಐ ಚನ್ನವಿರಪ್ಪ, ಎಎಸ್ಐ ನಜಮೋದ್ದೀನ್, ಸಿಬ್ಬಂದಿ ಸಿದ್ದಣ್ಣ, ಬೀರಪ್ಪ, ಸಂತೋಷ, ದಸ್ತಯ್ಯ, ಗುರುರಾಜ, ನಾಗರಾಜ, ಚನ್ನಬಸಯ್ಯ, ಸಿದ್ದಣ್ಣ, ವೀರೇಶ ಅವರ ತಂಡ ಕರ‍್ಯಾಚರಣೆ ನಡೆಸಿ, ಬಂಧಿಸಿದ್ದಕ್ಕೆ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ.ಶ್ಲಾಘಿಸಿದ್ದಾರೆ.