ಜಿಲ್ಲೆ

ಮಾನಸಿಕ ಅಸ್ವಸ್ಥಗೆ ಸಲಿಂಗ ಕಿರುಕುಳ ನೀಡಿದಾತ ಬಂಧನ

ಸೌಮ್ಯ ಆರ್

ಕಾಸರಗೋಡು: ಮಾನಸಿಕ ಅಸ್ವಸ್ಥ ವಿದ್ಯಾರ್ಥಿಗೆ ಸಲಿಂಗ ಕಿರುಕುಳ ನೀಡಿದ್ದ ಆರೋಪಿ ಪೊವ್ವಲ್ ನಿವಾಸಿ ಸಾದಿಕ್(24) ಎಂಬಾತನನ್ನು ಆದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಈತನ ವಿರುದ್ಧ ಆದೂರು ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಚೆಂಗಳ ಪಂಚಾಯಿತಿ ವ್ಯಾಪ್ತಿಯ ಕ್ವಾಟ್ರಸ್ ಒಂದರಲ್ಲಿ ವಾಸಿಸುತ್ತಿರುವ 20ರ ಹರೆಯದ ವಿದ್ಯಾರ್ಥಿಗೆ, ಆರೋಪಿ ಮಾದಕ ಪದಾರ್ಥ ನೀಡಿ ಸಲಿಂಗ ಕಿರುಕುಳ ನೀಡಿದ್ದ.