ಜಿಲ್ಲೆ

ಅನುಚಿತವಾಗಿ ವರ್ತಿಸುತ್ತಿದ್ದ ಇಬ್ಬರ ಬಂಧನ

Mangaluru - Nishantha Narayana

ಪುತ್ತೂರು: ದರ್ಬೆಯ ರಸ್ತೆ ಬದಿಯಲ್ಲಿ ಇಬ್ಬರು ಅನುಚಿತವಾಗಿ ವರ್ತಿಸುತ್ತಿರುವ ಮಾಹಿತಿ ಮೇರೆಗೆ ಇಬ್ಬರನ್ನು ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆ ನಡೆಸಿದಾಗ ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿದೆ. ಕೆಮ್ಮಿಂಜೆ ನಿವಾಸಿ ಸಪ್ವಾನ್(೩೦), ತೆಕ್ಕಾರು ನಿವಾಸಿ ಮೊಹಮ್ಮದ್ ಅರ್ಷದ್(೧೯) ಬಂಧಿತರಾಗಿದ್ದಾರೆ. ಇಬ್ಬರ ಮೇಲೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.