ಜಿಲ್ಲೆ

ಮಹಿಳೆ, ಅಂಗವಿಕಲ ಮಗನಿಗೆ ಥಳಿಸಿದವ ಬಂಧನ

ಕಾಸರಗೋಡು: ಮಹಿಳೆ ಹಾಗೂ ಅವರ ಅಂಗವಿಕಲ ಪುತ್ರನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಅಂಗಡಿಮೊಗರು ನಿವಾಸಿ ರಜಾಕ್(31) ಎಂಬಾತನನ್ನು ಕುಂಬಳೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಂಬಾರು ಕುಡಾಲುಮೇರ್ಕಳ ಕಾನಡ್ಕ ನಿವಾಸಿ ಕುಸುಮಾ(65)ಎಂಬುವರ ಮನೆಗೆ ನುಗ್ಗಿ ಕುಸುಮಾ ಹಾಗೂ ಅವರ ಅಂಗವಿಕಲ ಪುತ್ರ ದಿನೇಶ್‌ಮೇಲೆ ಹಲ್ಲೆ ನಡೆಸಿರುವ ಬಗ್ಗೆ ಪೊಲೀಸರು ರಜಾಕ್ ವಿರುದ್ಧ ಕೇಸ್ ದಾಖಲಿಸಿಕೊಂಡಿದ್ದರು. ಆರೋಪಿ ವಿರುದ್ಧ ಹಿಂದೆ ಹತ್ಯಾಯತ್ನ ಹಾಗೂ ಹೊಡೆದಾಟಕ್ಕೆ ಸಂಬಂಧಿಸಿ ಕೇಸ್ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.