ಕುಶಾಲನಗರ:
ಮಂಗಳವಾರ ಸಿದ್ದಲಿಂಗಪುರ ಸಮೀಪದ ಆರಗಲ್ಲು ಗ್ರಾಮದಲ್ಲಿ ಸ್ಕೂಟಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದು ಸ್ಕೂಟಿ ಸವಾರ ಮೃತಪ್ಟ ಪ್ರಕರಣಕ್ಕೆ ಸಂಬAಧಿಸಿದAತೆ ಬಸ್ ಚಾಲಕ ಮುರುಗೇಶ್ (55) ಎಂಬಾತನನ್ನು ಕುಶಾಲನಗರ ಗ್ರಾಮಾಂತರ ಪೊಲೀಸರು ಬುಧವಾರ ಬಂಧಿಸಿದ್ದಾರೆ ಎಸ್‌ಪಿ ಕೆ. ರಾಮರಾಜನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಶಾಲನಗರ ನೆಹರು ಬಡಾವಣೆ ನಿವಾಸಿಯಾದ ಈತ ಮದ್ಯಪಾನ ಮಾಡಿ ವಾಹನ ಚಲಾಯಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡುಬAದಿದೆ. ಮದ್ಯಪಾನ ಮಾಡಿ ರಸ್ತೆಯಲ್ಲಿ ವಾಹನ ಚಲಾಯಿಸುವ ಸಂದರ್ಭ ಅಪಘಾತವಾದಲ್ಲಿ ಜೀವಕ್ಕೆ ಹಾನಿಯುಂಟಾಗುವ ಬಗ್ಗೆ ಅರಿವಿದ್ದರೂ ಸಹ ಮದ್ಯಪಾನ ಮಾಡಿ ಅತೀವೇಗ ಮತ್ತು ಅಜಾಗೂಕತೆಯಿಂದ ವಾಹನ ಚಾಲನೆ ಮಾಡಿ ಸ್ಕೂಟಿ ಚಾಲಕನ ಮರಣಕ್ಕೆ ಕಾರಣವಾಗಿರುವ ಆರೋಪ ಹೊರಿಸಿ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ಬಂಧಿಸಿದ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಕುಶಾಲನಗರದಿಂದ ಶನಿವಾರಸಂತೆಗೆ ಹೋಗುವ ಮುಖ್ಯ ರಸ್ತೆಯಲ್ಲಿ ಆರಗಲ್ಲು ಗ್ರಾಮದ ಬಳಿ ಮಂಗಳವಾರ ಸಂಭವಿಸಿದ್ದ ಈ ಅಪಘಾತದಲ್ಲಿ ಸ್ಕೂಟಿ ಸವಾರ ಸಿದ್ದಲಿಂಗಪುರ ಗ್ರಾಮದ ನಿವಾಸಿ ಅಶೋಕ್ ಕುಮಾರ್ (60) ಸ್ಥಳದಲ್ಲಿಯೇ ಮೃತಪಟ್ಟಿದ್ದರು.
ವಾಹನ ಚಾಲಕರು ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದರೆ, ಅಪಘಾತ ಸಂಭವಿಸುವ ಹಾಗೂ ಅಪಘಾತದಲ್ಲಿ ಜೀವಕ್ಕೆ ಹಾನಿಯಾಗುವ ಬಗ್ಗೆ ಅರಿವಿದ್ದರೂ ಸಹ ಮದ್ಯಪಾನ ಮಾಡಿ ವಾಹನ ಚಲಾಯಿಸಿ ಅಪಘಾತಪಡಿಸಿದ್ದಲ್ಲಿ ಕೊಲೆಯಲ್ಲದ ಅಪರಾಧಿಕ ನರಹತ್ಯೆ ಮಾಡುವ ವ್ಯಕ್ತಿಗೆ ಕನಿಷ್ಠ 10 ವರ್ಷಗಳ ಜೈಲು ಶಿಕ್ಷೆ ಅಥವಾ ಗರಿಷ್ಠ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ. ರಸ್ತೆಯಲ್ಲಿ ವಾಹನ ಚಲಾಯಿಸುವಾಗ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
ವಾಹನ ಮಾಲೀಕರು ಅಪ್ರಾಪ್ತರಿಗೆ, ವಾಹನ ಪರವಾನಿಗೆ ಹೊಂದಿಲ್ಲದವರಿಗೆ ವಾಹನ ಚಲಾಯಿಸಲು ಅಸ್ಪದ ನೀಡಬಾರದು ಮತ್ತು ಅಪಾಪ್ತರು ವಾಹನ ಚಲಾಯಿಸುವುದು ಕಂಡುಬAದಲ್ಲಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.