ರಾಯಚೂರು: ವಿಶ್ವಕಪ್ ಕ್ರಿಕೆಟ್‌ನಲ್ಲಿ ಭಾರತ ತಂಡದ ಗೆಲುವಿಗಾಗಿ ಭಾರತೀಯರು ಕಾತುರದಿಂದ ಕಾದು ನೋಡುತ್ತಿರುವ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ತಮ್ಮ ಮದುವೆ ನಡೆಯುತ್ತಿರುವ ಕಲ್ಯಾಣ ಮಂಟಪದಲ್ಲಿ ಎರಡು ದೊಡ್ಡ ಪರದೆಗಳಲ್ಲಿ ೈನಲ್ ಪಂದ್ಯ ವೀಕ್ಷಣೆಗೆ ವ್ಯವಸ್ಥೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಭಾನುವಾರ ನಡೆಯುತ್ತಿರುವುದರಿಂದ ಮದುವೆಗೆ ಬರುವ ಜನರು ೈನಲ್ ಪಂದ್ಯ ವೀಕ್ಷಣೆಯಿಂದ ತಪ್ಪಿಸಿಕೊಳ್ಳಬಾರದು ಎನ್ನುವ ಕಾರಣಕ್ಕೆ ಸಿರವಾರ ತಾಲೂಕಿನ ನುಗಡೋಣಿ ಗ್ರಾಮದ ಹಳೇಮನಿ ಕುಟುಂಬ ಮದುವೆ ನಡೆಯುತ್ತಿರುವ ರಾಯಚೂರಿನ ಹರ್ಷಿತಾ ಗಾರ್ಡನ್‌ನಲ್ಲಿ ಪಂದ್ಯ ವೀಕ್ಷಣೆಗೆ ಅವಕಾಶ ಮಾಡಿದೆ.
ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಹರ್ಷವರ್ಧನ್ ಮತ್ತು ಸಹನಾ ಮದುವೆಗೆ ಶುಭಕೋರಲು ಆಗಮಿಸಿದ ಜನರು ಕಲ್ಯಾಣ ಮಂಟಪದಲ್ಲಿ ಕ್ರಿಕೆಟ್ ಪಂದ್ಯಾವಳಿ ವೀಕ್ಷಣೆಗೆ ವ್ಯವಸ್ಥೆಯಿರುವ ಕಾರಣಕ್ಕೆ ಕಲ್ಯಾಣ ಮಂಟಪದಿಂದ ಮನೆಗೆ ಹೋಗಲು ತರಾತುರಿ ನಡೆಸದೇ ಕುಳಿತು ೈನಲ್ ಪಂದ್ಯವನ್ನು ವೀಕ್ಷಿಸಿದರು.
ೈನಲ್ ಪಂದ್ಯದಲ್ಲಿ ಭಾರತ ಗೆಲುವಿಗಾಗಿ ಜಿಲ್ಲೆಯ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಸಲಾಗಿದ್ದು, ನಗರದ ನಂದೀಶ್ವರ ದೇವಸ್ಥಾನದಲ್ಲಿಯೂ ಅಭಿಮಾನಿಗಳು ವಿಶೇಷ ಪೂಜೆ ನೆರವೇರಿಸಿ ಭಾರತ ತಂಡದ ಗೆಲುವಿಗಾಗಿ ಪ್ರಾರ್ಥನೆ ನಡೆಸಿದರು.
ಜತೆಗೆ ೈನಲ್ ಪಂದ್ಯದ ವೀಕ್ಷಣೆಗಾಗಿ ಹಲವೆಡೆ ದೊಡ್ಡ ಪರದೆಗಳನ್ನು ಹಾಕಲಾಗಿದ್ದು, ನಗರದ ಮಹಿಳಾ ಸಮಾಜದ ಮೈದಾನದಲ್ಲಿ ಎನ್.ಎಸ್.ಬೋಸರಾಜು ೌಂಡೇಷನ್‌ನಿಂದ ದೊಡ್ಡ ಪರದೆಯಲ್ಲಿ ಪಂದ್ಯ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು.