ಹಿರೇಕೆರೂರ: ಪಟ್ಟಣ ಪಂಚಾಯಿತಿ ಎದುರು ಆಟೋ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಚೌಡಿ ವೃತ್ತದಲ್ಲಿ ವಾಹನ ಸಂಚಾರ ಸುಗಮವಾಗಿದ್ದು, ವ್ಯಾಪಾರಸ್ಥರಿಗೆ ವಹಿವಾಟಿಗೆ ಇದ್ದ ಅಡ್ಡಿ ದೂರವಾದಂತಾಗಿದೆ.
ಪಟ್ಟಣದ ಚೌಡಿ ವೃತ್ತ ಚಿಕ್ಕದಾಗಿದ್ದು, ಅಡ್ಡಾದಿಡ್ಡಿ ಆಟೋ ನಿಲುಗಡೆಯಿಂದ ಆಗುತ್ತಿರುವ ಸಮಸ್ಯೆ ಕುರಿತು ‘ಚೌಡಿ ವೃತ್ತದಲ್ಲಿ ಸಂಚಾರಕ್ಕೆ ಅಡ್ಡಿ’ ಶೀರ್ಷಿಕೆಯಡಿ ವಿಜಯವಾಣಿ ದಿನಪತ್ರಿಕೆಯಲ್ಲಿ ಏ. 6ರಂದು ವರದಿ ಪ್ರಕಟಿಸಲಾಗಿತ್ತು.
ವರದಿ ಪ್ರಕಟಗೊಂಡ ಬೆನ್ನಲ್ಲೇ ಆಟೋ ಚಾಲಕರು ಮತ್ತು ಮಾಲೀಕರು, ಪಪಂ ಮುಖ್ಯಾಧಿಕಾರಿಯನ್ನು ಭೇಟಿ ಮಾಡಿ ಪಪಂ ಎದುರು ಆಟೋ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲು ಮನವಿ ಮಾಡಿದ್ದರು. ಆದರೆ, ಅವರು ಇದಕ್ಕೆ ಒಪ್ಪಿರಲಿಲ್ಲ. ನಂತರ ಶಾಸಕ ಯು.ಬಿ. ಬಣಕಾರ ಅವರ ಗಮನಕ್ಕೆ ತರಲಾಯಿತು. ಆಟೋದವರ ಮನವಿಗೆ ಸ್ಪಂದಿಸಿದ ಶಾಸಕರು ಪಟ್ಟಣ ಪಂಚಾಯಿತಿ ಎದುರು ಆಟೋ ನಿಲುಗಡೆಗೆ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.