ಕ್ರೀಡಾಪಟು ಅಕ್ಷತಾ ಪೂಜಾರಿ ಬೋಳ ಅವರನ್ನು ಕಳಸದ ಗೆಳೆಯರ ಬಳಗದಿಂದ ಸನ್ಮಾನಿಸಲಾಯಿತು. ಬಿ.ಕೆ.ಮಹೇಶ್, ಶಿವಪ್ರಸಾದ್, ದಿವ್ಯಾ, ಶಿಲ್ಪಾ, ಆಶಾ ಇತರರಿದ್ದರು. 
ಜಿಲ್ಲೆ

ಕ್ರೀಡಾಕ್ಷೇತ್ರದ ಅವಕಾಶ ಬಳಿಸಿಕೊಳ್ಳಿ

ಎಸ್.ಎನ್.ರವೀಂದ್ರ

ಳಸ: ಇತ್ತೀಚೆಗೆ ದಕ್ಷಿಣ ಆಫ್ರಿಕಾದ ಪೊಟ್‌ಶೆಫ್ಟ್ರೂಮ್‌ನಲ್ಲಿ ನಡೆದ ಏಷ್ಯಾ-ಪೆಸಿಫಿಕ್-ಆಫ್ರಿಕನ್ ಪವರ್‌ಲಿಫ್ಟಿಂಗ್ ಮತ್ತು ಬೆಂಚ್‌ಪ್ರೆಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಅಕ್ಷತಾ ಪೂಜಾರಿ ಬೋಳ ಅವರನ್ನು ಕಳಸದ ಗೆಳೆಯರ ಬಳಗದಿಂದ ಗೌರವಿಸಲಾಯಿತು.

ಕಳಸಕ್ಕೆ ಆಗಮಿಸಿದ್ದ ಅಕ್ಷತಾ ಪೂಜಾರಿ ಅವರನ್ನು ಸನ್ಮಾನಿಸಿ ಗೆಳೆಯರ ಬಳಗದ ಮುಖ್ಯಸ್ಥ ಸುಧಾಕರ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಬೆಳೆದ ಅಕ್ಷತಾ 2011ರ ಕಾಮನ್‌ವೆಲ್ತ್ ಪವರ್ ಲಿಫ್ಟಿಂಗ್‌ನಲ್ಲಿ ಚಿನ್ನದ ಪದಕ, 2014ರಲ್ಲಿ ಅಮೇರಿಕಾದ ಲಾಸ್ ವೆಗಸ್‌ನಲ್ಲಿ ನಡೆದ ವಿಶ್ವ ಬೆಂಚ್‌ಪ್ರೆ ಚಾಂಪಿಯನ್‌ಶಿಪ್‌ನಲ್ಲಿ ಎರಡು ಚಿನ್ನ, ದುಬೈನಲ್ಲಿ 2018ರಲ್ಲಿ ನಡೆದ ಬೆಂಚ್‌ಪ್ರೆ ಚಾಂಪಿಯನ್‌ಶಿಪ್‌ನಲ್ಲಿ ಎರಡು ಚಿನ್ನ, ಕಜಕಿಸ್ತಾನದಲ್ಲಿ ನಡೆದ ವಿಶ್ವ ಬೆಂಚ್‌ಪ್ರೆ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದು ಭಾರತಕ್ಕೆ ಕೀರ್ತಿ ತಂದಿದ್ದಾರೆ ಎಂದರು.
ಅಕ್ಷತಾ ಪೂಜಾರಿ ಮಾತನಾಡಿ, ಕಠಿಣ ಪರಿಶ್ರಮದಿಂದ ಏನನ್ನು ಬೇಕಾದರೂ ಸಾಧಿಸಬಹುದು. ಸಾಧನೆ ಮಾಡಲು ಸಾಕಷ್ಟು ಅವಕಾಶಗಳು ಇವೆ. ಕ್ರೀಡಾ ಕ್ಷೇತ್ರದಲ್ಲಿ ಹೆಣ್ಣು ಮಕ್ಕಳಿಗೆ ಸಾಕಷ್ಟು ಅವಕಾಶಗಳು ಇದ್ದು, ಅದನ್ನು ಬಳಕೆ ಮಾಡಿಕೊಳ್ಳಬೇಕು, ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳಲ್ಲಿ ಪ್ರತಿಭೆ ಇದ್ದರೂ ಆರ್ಥಿಕ ಸಮಸ್ಯೆಯಿಂದ ಮುಂದೆ ಬರಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಕೂಡ ಇಂಥ ಕ್ಷೇತ್ರಗಳಿಗೆ ಉತ್ತೇಜನ ನೀಡಿದಾಗ ಸಾಕಷ್ಟು ಹೆಣ್ಣು ಮಕ್ಕಳು ಕ್ರೀಡೆಯಲ್ಲಿ ಸಾಧನೆ ಮಾಡಬಹುದು ಎಂದು ಹೇಳಿದರು.
ತಂಡದ ಸದಸ್ಯರಾದ ಬಿ.ಕೆ.ಮಹೇಶ್, ಶಿವಪ್ರಸಾದ್, ವಿದ್ಯಾನಂದ, ದಿವ್ಯಾ, ಶಿಲ್ಪಾ, ಆಶಾ ಇತರರಿದ್ದರು.