ಬೆಂಗಳೂರು: ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚು ಪ್ರಗತಿ ಸಾಧಿಸಿದಾಗ ಉತ್ತಮ ಸೌಲಭ್ಯಗಳು ಕಡಿಮೆ ಬೆಲೆಗೆ ಲಭ್ಯವಾಗುತ್ತದೆ ಎಂದು ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾಮೂರ್ತಿ ಹೇಳಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ಬುಧವಾರ ಆಯೋಜಿಸಿದ್ದ ಇನ್ಫೋಸಿಸ್ ಫೌಂಡೇಶನ್ನ 3ನೇ ಆವೃತ್ತಿಯ 'ಆರೋಹಣ್ ಸೋಶಿಯಲ್ ಇನ್ನೋವೇಶನ್' ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಸಾಮಾಜಿಕ ಬೆಳವಣಿಗೆಗೆ ನೆರವಾಗುವ ಜನೋಪಕಾರಿ ಸಂಶೋಧನೆಗಳು ದೇಶದಲ್ಲಿ ಆಗಬೇಕು. ಅಗತ್ಯ ನೆರವು ಸಿಕ್ಕಾಗ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತವೆ. ಇದಕ್ಕೆ ಪೂರಕ ವಾತಾವರಣ ಕಲ್ಪಿಸಿಕೊಡುವುದು ಇನ್ಫೋಸಿಸ್ ಫೌಂಡೇಷನ್ನ ಮುಖ್ಯ ಉದ್ದೇಶ ಎಂದರು.
ಸಂಶೋಧಕರು ಯಾವುದೇ ಕಾರಣಕ್ಕೂ ವಿಶ್ವಾಸ ಕಳೆದುಕೊಳ್ಳಬಾರದು. ಯಾಕಾಗಿ ಪ್ರಯತ್ನ ವಿಲವಾಯಿತು ಎಂಬ ಪ್ರಶ್ನೆಗೆ ಮೊದಲು ಉತ್ತರ ಕಂಡುಕೊಳ್ಳಬೇಕು. ಗೆದ್ದೇ ಗೆಲ್ಲುತ್ತೇವೆ ಎಂಬ ನಂಬಿಕೆ ಮುಂದಿಟ್ಟುಕೊಂಡು ಪ್ರಯತ್ನಿಸಿದಾಗ ಯಶಸ್ವಿಯಾಗಲು ಸುಲಭಸಾಧ್ಯವಾಗುತ್ತದೆ ಎಂದು ಕಿವಿಮಾತು ಹೇಳಿದರು.
ಇನ್ಫೋಸಿಸ್ ಫೌಂಡೇಶನ್ನ ಮುಖ್ಯಸ್ಥ ಸಲೀಲ್ ಪರೇಖ್ ಮಾತನಾಡಿ, ಪ್ರಪಂಚದಲ್ಲಿ ಕಠಿಣ ಎಂದೆನಿಸಿದ ಸಮಸ್ಯೆಗಳನ್ನು ಸಂಶೋಧನೆಯಿಂದ ಪರಿಹರಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಆರೋಹಣ್ ಸೋಷಿಯಲ್ ಇನ್ನೋವೇಶನ್ ಪ್ರಶಸ್ತಿ ಪ್ರೋತ್ಸಾಹ ನೀಡುವುದಲ್ಲದೇ ಸಾಮಾಜಿಕ ನಾವೀನ್ಯತೆಗಳಿಗೂ ಉತ್ತೇಜನ ನೀಡುತ್ತಿದೆ ಎಂದು ಹೇಳಿದರು.
ಇನ್ಫೋಸಿಸ್ ಫೌಂಡೇಶನ್ ಆರೋಗ್ಯ, ಶಿಣ ಮತ್ತು ಮಹಿಳಾ ಸಬಲೀಕರಣ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. 2,400ಕ್ಕೂ ಅಧಿಕ ಅರ್ಜಿಗಳನ್ನು ಪರಿಶೀಲಿಸಿ ವಿಜೇತರನ್ನು ಘೋಷಿಸಿದ್ದು, ಬಹುಮಾನಿತರಿಗೆ ತಲಾ 50 ಲಕ್ಷ ರೂ. ನಗದು ಬಹುಮಾನ ಲಭಿಸಿದೆ.
ಇನ್ಫೋಸಿಸ್ ಫೌಂಡೇಶನ್ನ ಟ್ರಸ್ಟಿ ಸುಮಿತ್ ವೀರಮಣಿ, ಭಾರತೀಯ ಆಟಿಕೆ ಸಂಶೋಧಕ ಪದ್ಮಶ್ರೀ ಅರವಿಂದ್ ಗುಪ್ತ, ನಿಮ್ಹಾನ್ಸ್ನ ನಿರ್ದೇಶಕಿ ಡಾ.ಪ್ರತಿಮಾ ಮೂರ್ತಿ, ಮಹಿಳಾ ಮನಿ ಸಂಸ್ಥಾಪಕಿ ಸೈರೀ ಚಾಹಲ್ ಇತರರಿದ್ದರು.
ಯಾರ್ಯಾರಿಗೆ ಗೌರವ? (ತಲಾ 50 ಲಕ್ಷ ರೂ.)
- ಆರೋಗ್ಯ: ಸುಬ್ರಮಣ್ಯಂ ಪ್ರಸಾದ್, ಅಖಿತಾ ಕೊಲ್ಲೊಜು- ಹೈದರಾಬಾದ್ ("ಎನ್ಲೈಟ್ 360' ಎಂಬ ಆಧುನಿಕ, ಪೋರ್ಟೆಬಲ್, ಸ್ಟಾ$ಂಡ್ ಅಲೋನ್ ಮತ್ತು ಬ್ಯಾಟರಿಚಾಲಿತ ಸ್ಮಾರ್ಟ್ ಫೋಟೋ ಥೆರಪಿ ಸಾಧನ ಅನ್ವೇಷಕರು. ಇದರಿಂದ ಗಂಭೀರ ಸ್ವರೂಪದ ಜಾಂಡೀಸ್ ರೋಗಕ್ಕೆ ಚಿಕಿತ್ಸೆ ನೀಡಲು ಸಹಕಾರಿಯಾಗಿದೆ).
- ಶಿಕ್ಷಣ: ಸೀತಾರಾಮ ಮುತ್ತಂಗಿ- ಬೆಂಗಳೂರು (ದೃಷ್ಟಿದೋಷ ನಿವಾರಣೆ ಸಹಕಾರಿಯಾಗುವ "ಸ್ಮಾರ್ಟ್ ವಿಷನ್ ಗ್ಲಾಸಸ್'ಎಂಬ ಕೃತಕ ಬುದ್ಧಿಮತ್ತೆಯನ್ನೊಳಗೊಂಡ ಆವಿಷ್ಕಾರ)
- ಮಹಿಳಾ ಸಬಲೀಕರಣ: ಪುಣೆಯ ಸ್ವಯಂಸೇವಾ ಸಂಸ್ಥೆಯಾದ ಶೆಟ್ಟರ್ ಅಸೋಸಿಯೇಟ್ಸ್ (ಒಂದು ಮನೆ ಒಂದು ಶೌಚಗೃಹ' ಎಂಬ ಪರಿಕಲ್ಪನೆಯ ಯೋಜನೆಯನ್ನು ಜಾರಿಗೆ ತಂದ ಸಂಸ್ಥೆ)
ಐವರಿಗೆ ತೀರ್ಪುಗಾರರ ವಿಶೇಷ ಪ್ರಶಸ್ತಿ
ವಿಭಾಗವಾರು ವಿಜೇತರಲ್ಲದೆ, ತೀರ್ಪುಗಾರ ಮಂಡಳಿಯು ವಿನೂತನ ಸಾಧನೆ ಮೆರೆದ ತಂಡಗಳಿಗೆ ತಲಾ 10 ಲಕ್ಷ ರೂ. ನಗದು ಬಹುಮಾನವುಳ್ಳ ವಿಶೇಷ ಪ್ರಶಸ್ತಿಗೆ ಆಯ್ಕೆ ಮಾಡಿದೆ. 'ಸ್ವಾಸ' ಸಾಧನ ಕಂಡುಹಿಡಿದ ಹೈದರಾಬಾದ್ನ ನಾರಾಯಣ ರಾವ್ ಶ್ರೀಪಾದ, ಮನಮೋಹನ್ ಜೈನ್ ಮತ್ತು ವೆಂಕಟ್ ಯೆಚೂರಿ ತಂಡ; "ಸಿಕಲ್ ಸರ್ಟ್' ಸಿಕಲ್-ಸೆಲ್ ಅನಿಮಿಯಾ ಪರೀಕ್ಷೆ ಹಾಗೂ ಚಿಕಿತ್ಸೆಯಲ್ಲಿ ಬಳಸಲಾಗುವ ಸಾಧನ ಅನ್ವೇಷಿಸಿದ ಬೆಂಗಳೂರಿನ ಪೊ.ಸಾಯಿ ಶಿವ ಗೋರ್ತಿ, ಅರುಣ್ ಬಾಲಸುಬ್ರಮಣ್ಯನ್, ರಾಜೇಶ್ ಶ್ರೀನಿವಾಸ್ ಮತ್ತು ಯತೀಶ್ ಪ್ರಸಾಸ್ ದಾಸರಿ ತಂಡ; ಪೋರ್ಟಿಯಾ ಎಂಬ ಆಕ್ಸಿಜನ್ ಜನರೇಟರ್ ಕಂಡುಹಿಡಿದ ಬೆಂಗಳೂರಿನ ಜಾನ್ ಜಾಯ್ ಮತ್ತು ಸಂಜಯ್ ಕೆ.ಪಿಳ್ಳೆ ಅವರು ಪ್ರಶಸ್ತಿಗೆ ಪಾತ್ರರಾಗಿದ್ದಾರೆ. "ಎಮ್ವೋಲಿಯೋ' ಎಂಬ ಬ್ಯಾಟರಿ ಚಾಲಿತ ರೆಫ್ರಿಜರೇಟರ್ ಸಾಧನದ ಅನ್ವೇಷಿಸಿದ ಮಣಿಪಾಲದ ಮಯೂರು ಯು. ಶೆಟ್ಟಿ ಹಾಗೂ "ಮೋಧ ಪೆಡಲ್ ಆಪರೇಟಿಂಗ್ ಮಷಿನ್' ಕಂಡುಹಿಡಿದ ಹೈದರಾಬಾದ್ನ ಶಿವಕುಮಾರ್ ಮೋಧ ಇನ್ಫೋಸಿಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.