ಜಿಲ್ಲೆ

ವೇದಮೂರ್ತಿಗೆ ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷ ಗಾದಿ

ಗಂಗಾಧರ ಬಿ ವಿ

ಶಾಸಕ ಸಿ. ಪಿ ಯೋಗೇಶ್ವರ್ ಭರವಸೆ

ಚನ್ನಪಟ್ಟಣ: ಸಾರ್ವಜನಿಕ ಆಸ್ಪತ್ರೆಯ ನಿವೃತ್ತ ಫಾರ್ಮಾಸಿಸ್ಟ್ ಅಧಿಕಾರಿ ಎಂ. ವೇದಮೂರ್ತಿ ಅವರ ಸೇವೆ ತಾಲೂಕಿನ ಜನತೆಗೆ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷ ಜವಾಬ್ದಾರಿ ವಹಿಸುವುದಾಗಿ ಶಾಸಕ ಸಿ. ಪಿ ಯೋಗೇಶ್ವರ್ ತಿಳಿಸಿದರು.

ನಗರದ ಶತಮಾನೋತ್ಸವ ಭವನದಲ್ಲಿ ಸಾರ್ವಜನಿಕ ಆಸ್ಪತ್ರೆಯ ನಿವೃತ್ತ ಹಿರಿಯ ಫಾರ್ಮಾಸಿಸ್ಟ್ ಎಂ. ವೇದಮೂರ್ತಿ ಅವರಿಗೆ ತಾಲೂಕಿನ ಅಭಿಮಾನಿಗಳು ಹಾಗೂ ಸಂಘ ಸಂಸ್ಥೆಗಳು ಭಾನುವಾರ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ತಾಲೂಕಿನ ಜನತೆಗೆ ಅವರ ಸೇವೆ ಮುಂದೆಯೂ ಸಿಗಲಿ ಎಂಬ ಉದ್ದೇಶದಿಂದ ನನಗೆ ಸಾರ್ವಜನಿಕ ಆಸ್ಪತ್ರೆಯಲ್ಲಿರುವ ಆರೋಗ್ಯ ರಕ್ಷಾ ಸಮಿತಿಯ ಅಧ್ಯಕ್ಷ ಜವಾಬ್ದಾರಿಯನ್ನು ವಹಿಸುತ್ತೇನೆ ಎಂದು ವೇದಿಕೆಯಲ್ಲೆ ಘೋಷಿಸಿದರು.

ಗೌಡಗೆರೆ ಶ್ರೀ ಕ್ಷೇತ್ರದ ಧರ್ಮದರ್ಶಿ ಡಾ. ಮಲ್ಲೇಶ್ ಗುರೂಜಿ, ತಾಲೂಕು ಜೆಡಿಎಸ್ ಅಧ್ಯಕ್ಷ ಎಚ್.ಸಿ.ಜಯಮುತ್ತು, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಕೆ. ಸುಧೀಂದ್ರ, ಮುಖ್ಯ ಶಿಕ್ಷಕ ಅಮ್ಮಳ್ಳಿದೊಡ್ಡಿ ನಾಗೇಂದ್ರ, ಪತ್ರಕರ್ತ ಅಭಿಲಾಷ್ ಗೌಡ ಇದ್ದರು.