ಹುಬ್ಬಳ್ಳಿ: ರಾಜ್ಯದ ಎರಡನೇ ‘ದಿ ಆರೋಗ್ಯ ಕೆಫೆ’ ಹುಬ್ಬಳ್ಳಿಯಲ್ಲಿ ಭಾನುವಾರದಿಂದ ಆರಂಭವಾಗಿದ್ದು, ತಾಜಾ ಹಾಗೂ ಗುಣಮಟ್ಟದಿಂದ ಗ್ರಾಹಕರನ್ನು ತನ್ನತ್ತ ಸೆಳೆಯಲಿದೆ.
ಈಗಾಗಲೇ ಬೆಂಗಳೂರಿನಲ್ಲಿ ದಿ ಆರೋಗ್ಯ ಕೆಫೆ ತೆರೆಯಲಾಗಿದ್ದು, ಇಲ್ಲಿನ ತೋಳನಕೆರೆ ಎದುರಿಗೆ ಮತ್ತೊಂದು ಪ್ರಾರಂಭವಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ 5 ಕೆಫೆ ಆರಂಭವಾಗಲಿವೆ. ತಟ್ಟೆ ಇಡ್ಲಿ, ಘೀ ಪುದಿ ಇಡ್ಲಿ, ಬಟನ್ ಇಡ್ಲಿ, ಓಪನ್ ದೋಸೆ, ಘೀ ಮಸಾಲ ದೋಸೆ, ಘೀ ಗಾರ‌್ಲಿಕ್ ಮಸಾಲ ದೋಸೆ, ಖಾಲಿ ದೋಸೆ, ಪಡ್ಡು, ಅಕ್ಕಿ ರೊಟ್ಟಿ, ಬಿಸಿ ಬೇಳೆ ಬಾತ್, ಲೆಮನ್ ರೈಸ್, ಪೈನಾಪಲ್ ಕೇಸರಿ ಬಾತ್, ಫಿಲ್ಟರ್ ಕಾಫಿ ಮತ್ತು ಟಿ ಇಲ್ಲಿ ಲಭ್ಯವಿದೆ. ಮನೆಯಲ್ಲಿಯೇ ತಯಾರಿಸಿದ ಮಸಾಲೆಯನ್ನು ಅಡುಗೆಗೆ ಬಳಸಲಾಗುತ್ತಿದೆ ಎಂದು ಮಾಲೀಕರಾದ ಚಂದನ್ ಕುನ್ನೂರ ಹಾಗೂ ಸೂರಜ್ ಅಳವಂಡಿ ತಿಳಿಸಿದರು.
ಮಾಜಿ ಸಂಸದ ಮಂಜುನಾಥ ಕುನ್ನೂರ, ಗೋವಿಂದರೆಡ್ಡಿ ಅಳವಂಡಿ ಅವರು ಕೆಫೆಯನ್ನು ಉದ್ಘಾಟಿಸಿದರು. ರಾಜು ಕುನ್ನೂರ, ಸತೀಶ ಧವಳಗಿ (ಯುಎಸ್‌ಎ), ಮಹ್ಮದ್‌ರಫೀಕ್ ದರ್ಗಾದ, ಅಶೋಕ ಹುರುಳಿ, ರುದ್ರಪ್ಪ ಮೂಲಿಮನಿ, ಗಿರೀಶ ಸುಂಕದ ಇತರರು ಇತರರು ಇದ್ದರು.