ಜಿಲ್ಲೆ

ಮ್ಯಾಗನೊಲಿಯಾ ರೆಸಾರ್ಟ್ ಒತ್ತುವರಿ ತೆರವು

reportermys

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ವಿರಾಜಪೇಟೆ ತಾಲೂಕು ವ್ಯಾಪ್ತಿಯ ಆರ್ಜಿ ಗ್ರಾಮದಲ್ಲಿರುವ ಮ್ಯಾಗನೊಲಿಂಯ ರೆಸಾರ್ಟ್ ಸ್ವಾಧೀನದಲ್ಲಿದ್ದ ೯.೯೨ ಎಕರೆ ಅರಣ್ಯ ಜಾಗವನ್ನು ಮಂಗಳವಾರ ಅರಣ್ಯ ಇಲಾಖೆ ತನ್ನ ವಶಕ್ಕೆ ಪಡೆದುಕೊಂಡಿದೆ. ಆ ಮೂಲಕ ರೆಸಾರ್ಟ್ ಒತ್ತುವರಿ ಮಾಡಿಕೊಂಡಿದ್ದ ಜಾಗವನ್ನು ಸಂರಕ್ಷಿಸುವ ಕಾರ್ಯ ನಡೆದಿದೆ.

ಆರ್ಜಿ ಗ್ರಾಮದ ಸರ್ವೇ ನಂಬರ್ ೩೩೩/೧ಪಿ೧ ರ ಸೆಕ್ಷನ್ ೪ ರ ಅರಣ್ಯ ಜಾಗವನ್ನು ಮ್ಯಾಗನೊಲಿಯ ರೆಸಾರ್ಟ್ ಕಡೆಯವರು ಒತ್ತುವರಿ ಮಾಡಿಕೊಂಡಿದ್ದಾರೆಂದು ಆರ್ಜಿ ಗ್ರಾಮದಲ್ಲಿರುವ ವಾಲ್ಮೀಕಿ ಭವನದಲ್ಲಿ ಏಪ್ರಿಲ್‌ನಲ್ಲಿ ನಡೆದ ಕಂದಾಯ ಅದಾಲತ್‌ನಲ್ಲಿ ಸಾಮಾಜಿಕ ಕಾರ್ಯಕರ್ತ .ಟಿ. ಮದನ್ ರಾಜಪೇಟೆ ತಹಸೀಲ್ದಾರ್ ಯೋಗಾನಂದ ಗಮನ ಸೆಳೆದಿದ್ದರು.

ತಹಸೀಲ್ದಾರ್ ಸೂಚನೆಯನ್ವಯ ಅರಣ್ಯ ಮತ್ತು ಕಂದಾಯ ಇಲಾಖೆ ಒತ್ತುವರಿ ಜಾಗದ ಜಂಟಿ ಸರ್ವೇ ಮಾಡಿತ್ತು. ಆ ಸಂದರ್ಭದಲ್ಲಿ ರೆಸಾರ್ಟ್ ಸ್ವಾಧೀನದಲ್ಲಿ ೯.೯೨ ಎಕರೆ ಅರಣ್ಯ ಜಾಗ ಇರುವುದು ಪತ್ತೆಯಾಯಿತು.

ಅರಣ್ಯ ಜಾಗ ರೆಸಾರ್ಟ್ ಮಾಲೀಕರ ಅನುಭವ ಸ್ವಾಧೀನದಲ್ಲಿರುವ ಚಾರವನ್ನು ಕೊಡಗು ಏಕೀಕರಣ ರಂಗದ ಕಾರ್ಯದರ್ಶಿ ತೇಲಪಂಡ ಪ್ರಮೋದ್ ಸೋಮಯ್ಯ, ಪ್ರಮುಖರಾದ ಅಜ್ಜಿನಂಡ ತಮ್ಮು ಪೂವಯ್ಯ, ಪಾಂಡಿರ ಮುತ್ತಣ್ಣ, ಮಂದಪಂಡ ಸತೀಶ್ ಅಪ್ಪಚ್ಚು ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್. ಮೂರ್ತಿ ಗಮನಕ್ಕೆ ತಂದರು. ಕೊಡಗು ವನ್ಯಜೀ ಸಂಘದ ಮಾಜಿ ಅಧ್ಯಕ್ಷ ಕರ್ನಲ್ ಚೆಪ್ಪುಡಿರ ಮುತ್ತಣ್ಣ ಅರಣ್ಯ ಜಾಗ ಒತ್ತುವರಿ ಚಾರದ ಕುರಿತು ಅರಣ್ಯಾಧಿಕಾರಿಗಳ ಗಮನ ಸೆಳೆದಿದ್ದರು.

ಒತ್ತುವರಿ ಚಾರಕ್ಕೆ ಸಂಬಂಧಿಸಿದ್ದಂತೆ ರಾಜಪೇಟೆ ವಲಯ ಅರಣ್ಯಾಧಿಕಾರಿ ರೆಸಾರ್ಟ್ ಮಾಲೀಕರಿಗೆ ೩ ನೋಟೀಸ್ ಜಾರಿ ಮಾಡಿದ್ದರು. ತಮ್ಮ ರೆಸಾರ್ಟ್ ಸ್ವಾಧೀನದಲ್ಲಿ ಅರಣ್ಯ ಇಲಾಖೆ ಜಾಗ ಇದ್ದಲ್ಲಿ ಸರ್ವೇ ಮಾಡಿ ತೆಗೆದುಕೊಳ್ಳುವಂತೆ ರೆಸಾರ್ಟ್ ಕಡೆಯವರು ಸಮ್ಮತ್ತಿ ಸೂಚಿಸಿದರು.

ಮಂಗಳವಾರ ಅರಣ್ಯ ಮತ್ತು ಕಂದಾಯ ಇಲಾಖೆಯವರು ಜಂಟಿ ಸರ್ವೇ ಮೂಲಕ ಸೆಕ್ಷನ್ ೪ ರ ಘೋತ ಅರಣ್ಯ ಜಾಗವನ್ನು ಮರಳಿ ವಶಕ್ಕೆ ಪಡೆದುಕೊಳ್ಳಲಾಯಿತು. ಸರ್ವೇ ಭಾಗದವರು ಸವೇ ಮೂಲಕ ಜಾಗ ಗುರುತಿಸಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಮಾರ್ಕ್ ಮಾಡಿದರು.

ಹಲವು ವರ್ಷಗಳ ಹಿಂದೆಯೇ ಈ ಜಾಗ ಒತ್ತುವರಿಯಾಗಿದ್ದು, ಇಲ್ಲಿ ಹಳೆಯ ಕಾಫಿ ತೋಟದೆ. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಆಯೋಜಿತ ಕಂದಾಯ ಅದಾಲತ್‌ನಲ್ಲಿ ಗ್ರಾಮಸ್ಥರೊಬ್ಬರು ಒತ್ತುವರಿ ಬಗ್ಗೆ ಗಮನ ಸೆಳೆದಿದ್ದರು. ತದನಂತರ ಸರ್ವೇ ಮೂಲಕ ಒತ್ತುವರಿ ಜಾಗ ಗುರುತಿಸಲಾಗಿದೆ. ರೆಸಾರ್ಟ್ ಮಾಲೀಕರಿಗೆ ನೋಟೀಸ್ ಜಾರಿ ಮಾಡಿದ ನ್ನೆಲೆಯಲ್ಲಿ ಒತ್ತುವರಿ ಜಾಗ ಬಿಟ್ಟುಕೊಡಲು ಒಪ್ಪಿದರೆಂದು ವಿರಾಜಪೇಟೆ ವಲಯ ಅರಣ್ಯಾಧಿಕಾರಿ ಕಳ್ಳಿರ ದೇವಯ್ಯ ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ.

**
೧೯೯೧ ರಲ್ಲಿ ಆರ್ಜಿ ಮತ್ತು ಹೆಗ್ಗಳ ಗ್ರಾಮ ವ್ಯಾಪ್ತಿಯ ೧೬೪ ಎಕರೆ ಜಾಗವನ್ನು ಸೆಕ್ಷನ್ ೪ ರ ಅರಣ್ಯ ಜಾಗ ಎಂದು ಘೋಸಲಾಗಿತ್ತು. ಈ ಪೈಕಿ ಮ್ಯಾಗನೊಲಿಯ ರೆಸಾರ್ಟ್ ಅನುಭವ ಸ್ವಾಧೀನದಲ್ಲಿದ್ದ ೯.೯೨ ಎಕರೆ ಜಾಗವನ್ನು ಮರಳಿ ಅರಣ್ಯ ಇಲಾಖೆ ವಶಕ್ಕೆ ಪಡೆದುಕೊಳ್ಳಲಾಗಿದೆ. ಕಳ್ಳಿರ ದೇವಯ್ಯ, ವಲಯ ಅರಣ್ಯಾಧಿಕಾರಿ, ವಿರಾಜಪೇಟೆ.

**
ಕಂದಾಯ ಅದಾಲತ್‌ನಲ್ಲಿ ನಡೆದ ಸಭೆಯಲ್ಲಿ ಗಮನ ಸೆಳೆದ ನ್ನೆಲೆಯಲ್ಲಿ ಅರಣ್ಯ ಇಲಾಖೆಯವರು ಒತ್ತುವರಿ ಜಾಗ ಸ್ವಾಧೀನ ಪಡೆಸಿಕೊಳ್ಳಲು ಹೆಚ್ಚಿನ ಮುತುವರ್ಜಿ ತೋರಿದ್ದಾರೆ. ರೆಸಾರ್ಟ್‌ನವರು ಪ್ರತಿರೋಧ ವ್ಯಕ್ತ ಪಡಿಸದೇ ಜಾಗ ಬಿಟ್ಟುಕೊಟ್ಟಿರುವುದು ಒಳ್ಳೆಯ ಬೆಳವಣಿಗೆ. ವಿ.ಟಿ. ಮದನ್, ಸಾಮಾಜಿಕ ಕಾರ್ಯಕರ್ತ.

**
ಮ್ಯಾಗನೊಲಿಯ ರೆಸಾರ್ಟ್ ಒತ್ತುವರಿ ಮಾಡಿಕೊಂಡ ಜಾಗವನ್ನು ಅರಣ್ಯ ಇಲಾಖೆಗೆ ಪ್ರತಿರೋಧ ವ್ಯಕ್ತ ಮಾಡದೆ ಬಿಟ್ಟುಕೊಟ್ಟಿರುವುದು ಒಳ್ಳೆಯ ಬೆಳವಣಿಗೆ. ಇದೇ ರೀತಿ ಎಲ್ಲಾ ಒತ್ತುವರಿದಾರರು ತಮ್ಮ ಸ್ವಾಧೀನದಲ್ಲಿರುವ ಅರಣ್ಯ ಸೇರಿದ್ದಂತೆ ಸರ್ಕಾರಿ ಜಾಗ ಬಿಟ್ಟುಕೊಡಬೇಕು. ತೇಲಪಂಡ ಪ್ರಮೋದ್ ಸೋಮಯ್ಯ, ಕಾರ್ಯದರ್ಶಿ, ಕೊಡಗು ಏಕೀಕರಣ ರಂಗ.