ಜಿಲ್ಲೆ

ಅರಿತರೆ ಶರಣ-ಮರೆತರೆ ಮಾನವ: ಉಪನ್ಯಾಸಕಿ ಜೆ.ಪುಷ್ಪಲತಾ

ಮೈಸೂರು: ನಮ್ಮೊಳಗಿನ ಫಲವತ್ತತೆಯನ್ನು ನಾವು ಬಳಸಿಕೊಳ್ಳದೆ ಅನ್ಯ ಮನಸ್ಕತೆಯಿಂದಾಗಿ ನರಳುತ್ತಿದ್ದೇವೆ. ಇದು ಬೆಳಕಿನ ಅರಮನೆ ಇದ್ದ ಹಾಗೆ ಅರಿತರೆ ಶರಣ ಮರೆತರೆ ಮಾನವ ಎಂದು ಜೆಎಸ್‌ಎಸ್ ಮಹಿಳಾ ಕಾಲೇಜಿನ ಉಪನ್ಯಾಸಕಿ ಜೆ.ಪುಷ್ಪಲತಾ ಹೇಳಿದರು.
ಶರಣ ಸಾಹಿತ್ಯ ಪರಿಷತ್ತು ನಗರ ಘಟಕದಿಂದ ಶ್ರಾವಣ ಮಾಸದ ಅಂಗವಾಗಿ ಶ್ರೀರಾಂಪುರದಲ್ಲಿ ಮಂಗಳವಾರ ಆಯೋಜಿಸಿರುವ ವಚನ ಶ್ರಾವಣ ಮನೆ, ಮನೆ ವಚನದಲ್ಲಿ ಅವರು ಉಪನ್ಯಾಸ ನೀಡಿದರು.
ಘಟಕ ಅಧ್ಯಕ್ಷ ಮ.ಗು.ಸದಾನಂದಯ್ಯ ಅಧ್ಯಕ್ಷತೆ ವಹಿಸಿದ್ದರು. ಶಿವಲಿಂಗಸ್ವಾಮಿ, ಪ್ರಾಯೋಜಕರಾದ ಪಾರ್ವತಿ ಶಂಕರ್, ಶಾಂತಲಾ ವಾಗ್ದೇವಿ, ಮಂಗಳಾಮುದ್ದು ಮಾದಪ್ಪ, ನೀಲಾಂಬಿಕ ಮೃತ್ಯುಂಜಯ, ಶ್ರೀಕಂಠಯ್ಯ, ಲೋಕೇಶಪ್ಪ, ಚಿಕ್ಕಮಠ, ರೇವತಿ ಇತರರು ಇದ್ದರು.