ಸಿದ್ದಾಪುರ: ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಪಟ್ಟಣಕ್ಕೆ ನೀರು ಪೂರೈಸುತ್ತಿದ್ದ ಅರೆಂದೂರು ನಾಲಾ ದಲ್ಲಿ ನೀರು ತುಂಬಿಕೊಂಡಿದ್ದರಿಂದ ಪಟ್ಟಣ ಪಂಚಾಯಿತಿಯವರು ಕೊಂಚಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ.
ಜೂನ್ ಅಂತ್ಯದವರೆಗೂ ಮಳೆ ಬೀಳದೇ ಇದ್ದಿದ್ದರಿಂದ ಅರೆಂದೂರು ನಾಲಾ ಬರಿದಾಗಿತ್ತು. ಇದರಿಂದ ಪಟ್ಟಣ ಪಂಚಾಯಿತಿ ಆಡಳಿತ ಸ್ಥಳೀಯರಿಗೆ ಒಂದೂವರೆ ತಿಂಗಳು ಐದು ಟ್ಯಾಂಕರ್ ಮೂಲಕ ನೀರನ್ನು ಪೂರೈಸಿತ್ತು.
ಆದರೆ, ಜುಲೈ ಆರಂಭದಿಂದ ಮಳೆ ಬೀಳುತ್ತಿದ್ದು, ಅರೆಂದೂರು ನಾಲಾದಲ್ಲಿ ನೀರು ತುಂಬಿಕೊಂಡಿದೆ. ಈಗ ಮೊದಲಿನಂತೆ ಪಪಂ ಜನತೆಗೆ ನೀರು ಪೂರೈಕೆ ಮಾಡುತ್ತಿದೆ. ಟ್ಯಾಂಕರ್ ಮೂಲಕ ಜನತೆಗೆ ನೀರು ಪೂರೈಸಿದ್ದರಿಂದ ಪಪಂಗೆ ಆರ್ಥಿಕ ಹೊರೆ ಉಂಟಾಗಿತ್ತು.
ಒಂದು ವಾರದಿಂದ ಮಳೆ ಬೀಳುತ್ತಿದೆ. ಇದರಿಂದ ಪಟ್ಟಣಕ್ಕೆ ನೀರು ಪೂರೈಸಲಾಗುತ್ತಿದ್ದ ಅರೆಂದೂರು ನಾಲಾದಲ್ಲಿ ನೀರು ತುಂಬಿದೆ. ಮಳೆ ಬಾರದಿದ್ದರೆ ನೀರು ಪೂರೈಸುವುದು ಕಷ್ಟವಾಗಿತ್ತು.ಐ.ಜಿ. ಕೊಣ್ಣೂರು ಮುಖ್ಯಾಧಿಕಾರಿ, ಸಿದ್ದಾಪುರ ಪಪಂ