ಜಿಲ್ಲೆ

ಸೆ.29ರಂದು ಬೆಂಗಳೂರಿನಲ್ಲಿ ಅರ್ಚರಿ, ಫೆನ್ಸಿಂಗ್ ಸ್ಪರ್ಧೆ

ಮಂಡ್ಯ: ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟದ ಆರ್ಚರಿ ಮತ್ತು ಫೆನ್ಸಿಂಗ್ ಸ್ಪರ್ಧೆ ಸೆ.29ರಂದು ಬೆಂಗಳೂರಿನ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಜಿಲ್ಲೆಯಿಂದ ಭಾಗವಹಿಸುವ ಸ್ಪಧಿಗಳು ಸೆ.28ರಂದು ಸಂಜೆ 5.30ರೊಳಗೆ ಸಂಘಟಕರಲ್ಲಿ ವರದಿ ಮಾಡಿಕೊಳ್ಳಬಹುದು.

ಸ್ಪರ್ಧಿಗಳು ಕಡ್ಡಾಯವಾಗಿ ಇತ್ತೀಚಿನ ಭಾವಚಿತ್ರ, ಆಧಾರ್‌ಕಾರ್ಡ್‌ನ ನಕಲು ಪ್ರತಿಯೊಂದಿಗೆ ಇಲಾಖೆಯಿಂದ ನೀಡಲಾಗುವ ಅಕ್ರಿಡೆಷನ್ ಫಾರ್ಮ್ ಅನ್ನು ಪಡೆದುಕೊಂಡು ನೋಂದಣಿ ಸಮಯದಲ್ಲಿ ಹಾಜರುಪಡಿಸಬೇಕು. ಮಾಹಿತಿಗೆ ದೂ.ಸಂ 08232-224725 ಯನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.