ಮಂಗಳೂರು : ಬದುಕಿರುವಾಗಲೇ ದೇಹದ ಅಂಗವೊಂದನ್ನು ಆಪ್ತ ಸಂಬಂಧಿಗೆ ದಾನ ಮಾಡಿ ವಿಧಿಲೀಲೆಗೆ ಬಲಿಯಾದ ಉಪನ್ಯಾಸಕಿ ಅರ್ಚನಾ ಕಾಮತ್ ಅವರ ದಿವ್ಯಾತ್ಮಕ್ಕೆ ನುಡಿ ನಮನ ಕಾರ್ಯಕ್ರಮ ಮತ್ತು ರಕ್ತದಾನ ಶಿಬಿರ ಮಂಗಳೂರಿನ ಟಿ.ವಿ.ರಮಣ್ ಪೈ
ಸಭಾಂಗಣದಲ್ಲಿ ನಡೆಯಿತು. ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಆಯೋಜಿಸಿದ ಈ ಕಾರ್ಯಕ್ರಮವನ್ನು ಶಾಸಕ ವೇದವ್ಯಾಸ ಕಾಮತ್ ಉದ್ಘಾಟಿಸಿದರು.
ಈ ಸಂದರ್ಭ ಶಾಸಕ ಕಾಮತ್ ಮಾತನಾಡಿ ‘ ಬಾಲ್ಯದಿಂದಲೇ ಪರಿಚಯರಾಗಿದ್ದ ಅರ್ಚನಾ ಕಾಮತ್ ಅವರು ಶಿಕ್ಷಕಿಯಾಗಿ ವಿದ್ಯಾರ್ಥಿಗಳ ಅಚ್ಚುಮೆಚ್ಚಿನವರಾಗಿದ್ದರು. ಅವರ ಬದುಕು ನಮಗೆ ಆದರ್ಶವಾಗಿದೆ. ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ರಕ್ತದಾನ ಶಿಬಿರ ಆಯೋಜಿಸಿ ಅರ್ಚನಾ ಅವರ ಆತ್ಮೀಯರನ್ನು ಒಂದುಗೂಡಿಸಿ ಮಾದರಿ ಕಾರ್ಯ ನಡೆಸಿದೆ.
ಮಣೇಲ್ ಅಣ್ಣಪ್ಪ ನಾಯಕ್, ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್‌ನ ಹನುಮಂತ ಕಾಮತ್, ಕೆನರಾ ಹೈಸ್ಕೂಲ್ ಅಸೋಸಿಯೇಶನ್‌ನ ಆಡಳಿತ ಮಂಡಳಿಯ ನಿರ್ದೇಶಕ ಮಂಗಲ್ಪಾಡಿ ನರೇಶ್ ಶೆಣೈ, ಸಿಎ ಗೌತಮ್ ಪೈ ಉಪಸ್ಥಿತರಿದ್ದರು.
ಬಿಎನ್‌ಐ, ಸಹ್ಯಾದ್ರಿ ಶಿಕ್ಷಣ ಸಂಸ್ಥೆ, ಕೆನರಾ ಹೈಸ್ಕೂಲ್ ಅಸೋಸಿಯೇಷನ್, ಕೆಎಂಸಿ ಆಸ್ಪತ್ರೆ, ಬೆಸೆಂಟ್‌ಶಿಕ್ಷಣ ಸಂಸ್ಥೆ, ಯೂತ್ ಆಫ್ ಜಿಎಸ್‌ಬಿ, ಸಿಎ ಅಸೋಸಿಯೇಷನ್ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು. 98 ಮಂದಿ ರಕ್ತದಾನ ಮಾಡಿದರು.