ಸಿರಿಗೆರೆ: ಸಿರಿಗೆರೆ ಹಾಗೂ ಸುತ್ತಮುತ್ತನ ಗ್ರಾಮಗಳಲ್ಲಿ ಆರ್ಭಟ ಚಿತ್ರದ ಚಿತ್ರೀಕರಣ ನಡೆಯುತ್ತಿದೆ.
ಪಾರ್ಥಸಾರಥಿ ನಿರ್ದೇಶನದ ಚೊಚ್ಚಲ ಸಿನಿಮಾ ಆರ್ಭಟ ಚಿತ್ರವು ರೈತರು ಅನುಭವಿಸುತ್ತಿರುವ ಸಂಕಷ್ಟ ಹಾಗೂ ಹಳ್ಳಿಗಾಡಿನ ಪ್ರೇಮಿಗಳ ಒಲವಿನ ಕಥೆಯನ್ನು ಹೊಂದಿದೆ.
ಗ್ರಾಮಾಂತರ ಪ್ರದೇಶಗಳಲ್ಲಿ ಚಿತ್ರೀಕರಿಸುವ ಉದ್ದೇಶದಿಂದ ಸಿರಿಗೆರೆ ಮತ್ತು ಚಿಕ್ಕೇನಹಳ್ಳಿ, ಶಾಂತಿವನ ಮುಂತಾದ ಕಡೆ 10 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ.
ಸಿನಿಮಾಕ್ಕೆ ಹಾಡುಗಳ ಧ್ವನಿ ಮುದ್ರಣವು ಮುಗಿದಿದ್ದು, ಇದೊಂದು ಹಳ್ಳಿಗರ ಕುಟುಂಬದ ಕಥೆಯಾಗಿದ್ದು, ಮನೆ ಮಂದಿಯಲ್ಲ ಒಟ್ಟಿಗೆ ಕುಳಿತು ನೋಡಬಹುದಾದ ಸಿನಿಮಾ ಆಗಿದೆ ಎಂಬುದು ನಿರ್ದೇಶಕರ ಮಾತು.