ರಾಜ್ಯ ಅರಸು ಮಹಾ ಮಂಡಲಿ ಚಾರಿಟಬಲ್ ಟ್ರಸ್ಟ್ ಮತ್ತು ಡಿ.ದೇವರಾಜ ಅರಸು ದತ್ತಿ ಸಂಯುಕ್ತಾಶ್ರಯದಲ್ಲಿ ಆ. 27ರಂದು ಬೆಳಗ್ಗೆ 10.30ಕ್ಕೆ ತ್ಯಾಗರಾಜ ರಸ್ತೆಯ ವೇಣುಗೋಪಾಲಸ್ವಾಮಿ ದೇವಸ್ಥಾನದ ಆವರಣದಲ್ಲಿ ಡಿ.ದೇವರಾಜ ಅರಸು ಜನ್ಮ ದಿನೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ.
ಇದೇ ವೇಳೆ ಜಯರಾಮರಾಜೇ ಅರಸ್ ಅವರ ‘ಹೆಣ ಹೊರುವವನ ವೃತ್ತಾಂತ’ ಎಂಬ ಕೃತಿ ಬಿಡುಗಡೆ ಮತ್ತು ಅರಸು ಜನಾಂಗದ ಚಿಂತನ-ಮಂಥನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಬಿ.ಎಸ್.ಶ್ರೀಧರರಾಜೇ ಅರಸ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಕಾರ್ಯಕ್ರಮ ಉದ್ಘಾಟಿಸುವರು, ಡಾ.ಕವಿತಾ ಜಯರಾಮ್ ಕೃತಿ ಬಿಡುಗಡೆ ಮಾಡುವರು, ಪ್ರೊ.ಸಿ.ನಾಗಣ್ಣ ಕೃತಿ ಪರಿಚಯ ಮಾಡಿಕೊಡುವರು. ಚಿಂತನ-ಮಂಥನದಲ್ಲಿ ಮುಖಂಡರಾದ ಎಂ.ಎಲ್.ಬಸವರಾಜೇ ಅರಸ್, ಎಂ.ಜಿ.ಆರ್.ಅರಸ್, ಇಂದುಕಲಾ ಅರಸ್, ಕೆ.ವಿ.ಶ್ರೀಧರ್, ಸಿ.ವಿ.ಶ್ರೀಧರ್ ಭಾಗವಹಿಸಲಿದ್ದಾರೆ ಎಂದರು. ಪದಾಧಿಕಾರಿಗಳಾದ ಎಚ್.ಎಂ.ಟಿ.ಲಿಂಗರಾಜೇ ಅರಸ್, ವೈ.ಎಂ.ಕಿರಣ್ ಇದ್ದರು.