ಜಿಲ್ಲೆ

ತುಳುನಾಡಿನ ಸಂಸ್ಕೃತಿಯ ಪ್ರತೀಕ : ಅರಸು ಕಂಬಳ ವೇದಿಕೆಯಲ್ಲಿ ಐಕಳ ಹರೀಶ್ ಶೆಟ್ಟಿ ಆಶಯ

ಸೌಮ್ಯ ಆರ್

ಮೂಲ್ಕಿ: ಕಂಬಳ ತುಳುನಾಡಿನ ಸಂಸ್ಕೃತಿಯ ಪ್ರತೀಕವಾಗಿದ್ದು ಕಂಬಳ ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಜಾಗತಿಕ ಬಂಟರ ಸಂಘದ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಹೇಳಿದರು.

ಸುಮಾರು 400 ವರ್ಷಗಳ ಇತಿಹಾಸವಿರುವ ಮೂಲ್ಕಿ ಸೀಮೆಯ ಅರಸು ಕಂಬಳದ ವೇದಿಕೆಯಲ್ಲಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಡಾ.ದೇವಿ ಪ್ರಸಾದ್ ಶೆಟ್ಟಿ ಬೆಳಪು ಮಾತನಾಡಿದರು. ಮಾಜಿ ಸಚಿವರಾದ ರಮಾನಾಥ ರೈ, ಅಭಯ ಚಂದ್ರ ಕೆ., ಜಾಗತಿಕ ಬಂಟರ ಸಂಘದ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ, ಭಾರತ್ ಬ್ಯಾಂಕ್‌ನ ಅಧ್ಯಕ್ಷ ಸೂರ್ಯಕಾಂತ ಜಯ ಸುವರ್ಣ, ನಿಡ್ಡೋಡಿ ಚಾವಡಿ ಮನೆ ಜಗನ್ನಾಥ ಶೆಟ್ಟಿ, ಗುಣಪಾಲ ಕಡಂಬ, ಡಾ.ಅಮರಶ್ರೀ ಅಮರನಾಥ ಶೆಟ್ಟಿ, ಜಗದೀಶ್ ಅಧಿಕಾರಿ, ಸುಚರಿತ ಶೆಟ್ಟಿ, ಗುರುರಾಜ್ ಎಸ್ ಪೂಜಾರಿ, ಲೋಕೇಶ್ ಮುಚ್ಚೂರು, ಶರತ್ ಸಾಲ್ಯಾನ್, ಯೋಗೀಶ್ ಜೆಪ್ಪು, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ರವಿ ಶೆಟ್ಟಿ ಕತಾರ್, ರತ್ನಾಕರ ಜೈನ್, ಐಕಳ ಕಂಬಳ ಸಮಿತಿಯ ಚಿತ್ತರಂಜನ್ ಭಂಡಾರಿ ಸುಗಂಧಿ ದಿನೇಶ್ ಕೊಂಡಾಣ, ಉದ್ಯಮಿ ಆಸ್ಟಿನ್ ಸಂತೋಷ್, ಪದ್ಮರಾಜ್ ಪೂಜಾರಿ ಮಂಗಳೂರು, ಮುಲ್ಕಿ ಸೀಮೆ ಅರಸು ಕಂಬಳ ಸಮಿತಿಯ ಅಗತ್ಯ ಕಿರಣ್ ಶೆಟ್ಟಿ ಕೋಲ್ನಾಡುಗುತ್ತು, ಶ್ಯಾಮ್ ಪ್ರಸಾದ್, ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು, ವಿನೋದ್ ಸಾಲ್ಯಾನ್ ಬೆಳ್ಳಾಯರು, ಪ್ರೇಮಲತಾ ಯೋಗೀಶ್ ಮತ್ತಿತರರು ಉಪಸ್ಥಿತರಿದ್ದರು. ಸಮಿತಿಯ ನವೀನ್ ಶೆಟ್ಟಿ ಎಡ್ಮೆಮಾರ್ ನಿರೂಪಿಸಿದರು

ಸಾಧಕರಿಗೆ ಸನ್ಮಾನ

ಸಾಧಕರ ನಿಲೆಯಲ್ಲಿ ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ರವಿಶೆಟ್ಟಿ ಮೂಡಂಬೈಲು, ಮುಂಬೈ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಗುತ್ತಿನಾರ್ ರವೀಂದ್ರ ಶೆಟ್ಟಿ ಬಳ್ಕುಂಜೆಗುತ್ತು, ರೊನಾಲ್ಡ್ ಫೆರ್ನಾಂಡಿಸ್ ಅವರನ್ನು ಸನ್ಮಾನಿಸಲಾಯಿತು.

ಸರ್ಕಾರ 24 ಕಂಬಳಗಳಿಗೆ 5 ಲಕ್ಷ ರೂ. ಹಣ ಅನುದಾನ ಮಂಜೂರು ಮಾಡಿದ್ದು ಶ್ಲಾಘನೀಯ. ಕಂಬಳಗಳಿಗೆ ಭಾರತ ಸರ್ಕಾರದ ಮಾನ್ಯತೆ ಪಡೆಯಲು ಸಂಸದರ ಮೂಲಕ ಪ್ರಯತ್ನ ನಡೆಸಲಾಗುವುದು. ಕಂಬಳದ ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯ. ಡಾ.ದೇವಿ ಪ್ರಸಾದ್ ಶೆಟ್ಟಿ ಬೆಳಪು, ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ. https://www.vijayavani.net/tribute-to-madhur-balachandra-kallurai https://www.vijayavani.net/theft-case-5