ಜಿಲ್ಲೆ

ಕಿಂಡರ್ ಗಾರ್ಟನ್ ಆರಂಭಿಸಲು ಯತ್ನ

Davanagere

ಅರಸೀಕೆರೆ: ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಎಲ್ಕೆಜಿ, ಯುಕೆಜಿ ಆರಂಭಿಸಲು ಪ್ರಯತ್ನಿಸಲಾಗುವುದು ಎಂದು ಸಂಸದ ವೈ. ದೇವೇಂದ್ರಪ್ಪ ಹೇಳಿದರು.

ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಶಾರದಾ ಪೂಜೆ ಹಾಗೂ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ಮಕ್ಕಳಿಗೆ ವಿಜ್ಞಾನದ ಬಗ್ಗೆ ಆಸಕ್ತಿ ಬೆಳೆಸಬೇಕು. ಗುಣಮಟ್ಟದ ಶಿಕ್ಷಣ ನೀಡುವುದು ಮೊದಲ ಆದ್ಯತೆಯಾಗಬೇಕು. ಎಲ್ಲ ಮಕ್ಕಳಿಗೂ ಸಮಾನ ಆದ್ಯತೆ ನೀಡಬೇಕು ಎಂದು ಶಿಕ್ಷಕರಿಗೆ ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂಸಿ ಅಧ್ಯಕ್ಷ ಡಾ.ಎಂ. ಸುರೇಶ್ ಮಾತನಾಡಿ, ಗ್ರಾಮೀಣ ಶಾಲೆಗಳಲ್ಲಿ ಓದಿದ ಬಹುತೇಕರು ಉನ್ನತ ಹುದ್ದೆಗಳಲ್ಲಿದ್ದಾರೆ. ಶೇ.90ರಷ್ಟು ಮಂದಿ ಲೋಕಸಭೆ, ವಿಧಾನಸಭೆಯ ಸದಸ್ಯರಾಗಿದ್ದಾರೆ. ಇದಕ್ಕೆ ಸೂಕ್ತ ಉದಾಹರಣೆ ಸಂಸದ ದೇವೇಂದ್ರಪ್ಪ ಹಾಗೂ ಅವರ ಮಕ್ಕಳು ಎಂದು ತಿಳಿಸಿದರು.

ಎ.ಎಚ್. ನಾಗರಾಜ್, ಷಣ್ಮುಖಪ್ಪ, ಇಂಜಿನಿಯರ್ ಸತೀಶ್, ಮುಖ್ಯಶಿಕ್ಷಕ ಎನ್. ನಾಗರಾಜ್, ಅರ್ಜುನ ಪರಸಪ್ಪ, ಶಿವಮೂರ್ತಯ್ಯ, ಇಸಿಒ ಉದಯಶಂಕರ, ಸಿಆರ್‌ಪಿ ಇಸ್ಮಾಯಿಲ್, ಕತೆಗಾರ ಮಂಜಣ್ಣ, ಬಿ. ಪರಸಪ್ಪ ಉಪಸ್ಥಿತರಿದ್ದರು.