ಅರಸೀಕೆರೆ: ರಾಜ್ಯ ಸರ್ಕಾರದ ಸರಣಿ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಮುಖಂಡರು ನಗರದ ಬಸವೇಶ್ವರ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು. ನಗರ ಮಂಡಲ ಅಧ್ಯಕ್ಷ ಅವಿನಾಶ್ ನಾಯ್ಡು ಮಾತನಾಡಿ, ಗ್ಯಾರಂಟಿ ಘೋಷಣೆ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಜನ ಸಾಮಾನ್ಯರ ಜೇಬಿಗೆ ಬರೆ ಹಾಕಿ ಸುಲಿಗೆ ಮಾಡುವ ಪ್ರವೃತ್ತಿಗೆ ಇಳಿದಿರುವುದು ದುರದೃಷ್ಟಕರ. ಎರಡು ವರ್ಷದಲ್ಲಿ ಮೂರು ಬಾರಿ ಹಾಲಿನ ದರ ಹೆಚ್ಚಳ ಮಾಡಿದೆ.ಪಹಣಿ, ಸ್ಟ್ಯಾಂಪ್ ಡ್ಯೂಟಿ, ಅಬಕಾರಿ, ಜಾತಿ, ಆದಾಯ ಪ್ರಮಾಣ ಪತ್ರ ಸೇರಿದಂತೆ ಎಲ್ಲ ಬಗೆಯ ಅಗತ್ಯ ವಸ್ತುಗಳ ಮೇಲೆ ಪದೇ ಪದೆ ಬೆಲೆ ಹೆಚ್ಚಿಸಿದರೆ ಬಡವರ ಬದುಕು ದುಬಾರಿಯಾಗಲಿದೆ. ಐದು ಗ್ಯಾರಂಟಿ ಕೊಡಲು ಹೋಗಿ ಐವತ್ತು ರೀತಿಯಲ್ಲಿ ಹಣ ವಸೂಲಿಗೆ ಇಳಿದಿರುವುದು ಅಕ್ಷಮ್ಯ. ಜನರು ದಂಗೆ ಏಳುವ ಮುನ್ನ ಹಾಲು, ಮೊಸರಿನ ದರ ಕಡಿಮೆ ಮಾಡುವ ಜತೆಗೆ ಎಲ್ಲ ರೀತಿಯ ಹೊರೆ ತಗ್ಗಿಸಬೇಕು ಎಂದು ಆಗ್ರಹಿಸಿದರು.
ಗ್ರಾಮಾಂತರ ಮಂಡಲದ ಅಧ್ಯಕ್ಷರ ಯತೀಶ್ ಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಕಿರಣ್, ಸುನಿಲ್ ಶಾಸ್ತ್ರಿ, ಮಂಜು ಕುಮಾರ್, ಸಿಂಧು ಮುಖಂಡರಾದ,ಎನ್. ಡಿ. ಪ್ರಸಾದ್, ಮನೋಜ್ ಕುಮಾರ್, ಬಾಣಾವರ ಜಯಣ್ಣ, ಗಂಗಣ್ಣ, ದಿನೇಶ್, ಚೇತನ್ ಜೈನ್, ಸರೋಜಮ್ಮ, ಹೇಮಾವತಿ, ಪುರುಷೋತ್ತಮ್, ರಮೇಶ್, ಜಿಜಿ ಲೋಕೇಶ್, ಮುಂತಾದವರು ಉಪಸ್ಥಿತರಿದ್ದರು.ಗ್ರೇಡ್2 ತಹಸೀಲ್ದಾರ್ ಪಾಲಾಕ್ಷ ಅವರಿಗೆ ಮನವಿ ಸಲ್ಲಿಸಿದರು.