ಶಿವಯೋಗೀಶ್ವರ 
ಜಿಲ್ಲೆ

ಬಸವನಬಾಗೇವಾಡಿಯಲ್ಲಿ ಶಿವಯೋಗೀಶ್ವರ ಜಾತ್ರಾ ಮಹೋತ್ಸವ

ಬಸವನಬಾಗೇವಾಡಿ: ಪಟ್ಟಣದ ತಾಳಿಕೋಟೆ ರಸ್ತೆಯ ಮಿನಿ ವಿಧಾನಸೌಧ ಎದುರುಗಡೆ ಇರುವ ಕೋಣಿನವರ ತೋಟದಲ್ಲಿ ಪವಾಡಪುರುಷ ಅರಳಿಚಂಡಿ ಶಿವಪ್ಪ ಮುತ್ಯಾ ಶಿವಯೋಗೇಶ್ವರ ಜಾತ್ರಾ ಮಹೋತ್ಸವವನ್ನು ಡಿ.27 ರಂದು ಹಮ್ಮಿಕೊಳ್ಳಲಾಗಿದೆ.

ಅಂದು ಬೆಳಗ್ಗೆ 10 ಗಂಟೆಗೆ ಪಲ್ಲಕ್ಕಿ ಉತ್ಸವ ಸಕಲವಾದ್ಯ ವೈಭವದೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಕುಂಭಮೇಳದೊಂದಿಗೆ ಬಸವತೀರ್ಥ ಗಂಗಸ್ಥಳಕ್ಕೆ ತೆರಳುವುದು. ಅಲ್ಲಿಂದ ಸಕಲ ವಾದ್ಯದೊಂದಿಗೆ ದೇವಸ್ಥಾನಕ್ಕೆ ಪಲ್ಲಕ್ಕಿ ಉತ್ಸವ ತೆರಳುತ್ತದೆ. ದೇವಸ್ಥಾನದ ಗದ್ದುಗೆಗೆ ಕುಂಭಾಭಿಷೇಕ ಮಾಡಲಾಗುವುದು.

ಪುರವಂತರು, ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಹಾಗೂ ಭಕ್ತರೊಂದಿಗೆ ಮಧ್ಯಾಹ್ನ 3 ಗಂಟೆಗೆ ಪಲ್ಲಕ್ಕಿ ಉತ್ಸವದೊಂದಿಗೆ ಅಗ್ಗಿ ಹಾಯುವ ಕಾರ್ಯಕ್ರಮ ಜರುಗಲಿದೆ. ಬೆಳಗ್ಗೆಯಿಂದ ಸಂಜೆವರೆಗೆ ಅನ್ನ ಪ್ರಸಾದ ವ್ಯವಸ್ಥೆ ಮಾಡಲಾಗಿದೆ.

ರಾತ್ರಿ 9ಕ್ಕೆ ಸೊಲ್ಲಾಪುರ ಹಾಗೂ ಕಲಬುರಗಿ ಜಿಲ್ಲೆಯ ಡೊಳ್ಳಿನ ಕಲಾವಿದರಿಂದ ಡೊಳ್ಳಿನ ಹಾಡಕಿ ಪದಗಳು ಜರುಗಲಿವೆ. ಇಡೀ ರಾತ್ರಿ ಜಾಗರಣೆ ಕಾರ್ಯಕ್ರಮ ನಡೆಯಲಿದೆ ಎಂದು ಜಾತ್ರಾ ಮಹೋತ್ಸವ ಕಮಿಟಿ ಅಧ್ಯಕ್ಷ ಅಪ್ಪು ವಾಡೇದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.