ತಾಲೂಕಿನ ಗಲಗ ಗ್ರಾಮದಲ್ಲಿ ಆಯೋಜಿಸಿದ್ದ ಪ್ರೌಢಶಾಲೆಗಳ ವಲಯ ಮಟ್ಟದ ಕ್ರೀಡಾಕೂಟಕ್ಕೆ ಗ್ರಾಪಂ ಅಧ್ಯಕ್ಷೆ ಮದ್ಮಾವತಿ ದುರುಗಪ್ಪ ಗುಂಡು ಎಸೆಯುವ ಮೂಲಕ ಚಾಲನೆ ನೀಡಿದರು. ಪ್ರಮುಖರಾದ ಆರೋಢಮಠದ ಲಿಂಗಯ್ಯ ತಾತ, ಗ್ರಾಪಂ ಅಧ್ಯಕ್ಷೆ ಪದ್ಮಾವತಿ ದುರ್ಗಪ್ಪ, ಬಸವರಾಜ ಕುಂಬಾರ, ವಿರೂಪಾಕ್ಷಪ್ಪ ಸಾಹುಕಾರ, ಎಸ್ಡಿಎಂಸಿ ಅಧ್ಯಕ್ಷ ಚನ್ನಬಸವ ಕುಂಬಾರ, ಮಾಜಿ ಗ್ರಾಪಂ ಅಧ್ಯಕ್ಷ ತಿರುಪತಿ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹನುಮಂತ್ರಾಯ ಶಾಖೆ ಇದ್ದರು. 
ಜಿಲ್ಲೆ

ಗೆಲ್ಲುವ ಭರವಸೆಯೊಂದಿಗೆ ಕ್ರೀಡೆಯಲ್ಲಿ ಭಾಗವಹಿಸಿ, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಮುದುಕಣ್ಣ ಕವಡಿಮಟ್ಟ ಸಲಹೆ

ಅರಕೇರಾ: ವಿದ್ಯಾರ್ಥಿಗಳು ಗೆಲ್ಲುವ ಭರವಸೆಯೊಂದಿಗೆ ಕ್ರೀಡೆಯಲ್ಲಿ ಭಾಗವಹಿಸಬೇಕು ಎಂದು ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಮುದುಕಣ್ಣ ಕವಡಿಮಟ್ಟ ಹೇಳಿದರು.

ತಾಲೂಕಿನ ಗಲಗ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶಿಕ್ಷಣ ಇಲಾಖೆ ಹಾಗೂ ಗ್ರಾಪಂ ಸಹಯೋಗದಲ್ಲಿ ಬುಧವಾರ ಏರ್ಪಡಿಸಿದ್ದ ಜಾಲಹಳ್ಳಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಮಾತನಾಡಿದರು.

ಕ್ರೀಡೆ ಶಿಕ್ಷಣದ ಜತೆಯಲ್ಲಿರುವ ಪ್ರಮುಖ ಚಟುವಟಿಕೆ. ವಿದ್ಯಾರ್ಥಿ ಜೀವನದಲ್ಲಿ ಆಟಗಳು ಮಹತ್ವದಾಯಕವಾಗಿವೆ. ಬೋಧಿಸಿದ ಪ್ರತಿಜ್ಞಾವಿಧಿಯನ್ನು ಎಲ್ಲ ವಿದ್ಯಾರ್ಥಿಗಳು ಪಾಲಿಸಬೇಕು. ಕ್ರೀಡಾಪಟುಗಳು ಸಾಮರ್ಥ್ಯಕ್ಕೆ ಅನುಗುಣವಾಗಿ ಸಾಧಿಸುತ್ತಾರೆ. ಕ್ರೀಡಾಭಿಮಾನಿಗಳು ಗೊಂದಲ ಸೃಷ್ಟಿಸುವ ಕೆಲಸ ಮಾಡಬಾರದು. ನಿರ್ಣಾಯಕರ ತೀರ್ಪಿಗೆ ಎಲ್ಲರೂ ಬದ್ಧರಾಗಿರಬೇಕು ಎಂದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಮುಖ್ಯಶಿಕ್ಷಕ ಬಸವರಾಜ ಕಟ್ಟಿಮನಿ, ಜಾಲಹಳ್ಳಿ ವಲಯಕ್ಕೆ 16 ಪ್ರೌಢ ಶಾಲೆಗಳು ಬರುತ್ತವೆ. ಬಾಲಕ-ಬಾಲಕಿಯರ ಕ್ರೀಡೆಗಳಿಗೆ ವಿವಿಧ ತಂಡ ರಚನೆಯಾಗಿವೆ. ಇಲ್ಲಿಂದ ತಾಲೂಕು, ಜಿಲ್ಲೆ ಹಾಗೂ ರಾಜ್ಯ ಮಟ್ಟದವರೆಗೆ ಹೋಗಲು ಅವಕಾಶವಿದ್ದು, ಮಕ್ಕಳು ಉತ್ತಮ ಪ್ರದರ್ಶನ ನೀಡುವ ವಿಶ್ವಾವಿದೆ ಎಂದರು.

ಚನ್ನಬಸವೇಶ್ವರ ಆರೋಢಮಠದ ಲಿಂಗಯ್ಯ ತಾತ ಸಾನ್ನಿಧ್ಯ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಪದ್ಮಾವತಿ ದುರ್ಗಪ್ಪ, ಪ್ರಮುಖರಾದ ಬಸವರಾಜ ಕುಂಬಾರ, ವಿರೂಪಾಕ್ಷಪ್ಪ ಸಾಹುಕಾರ, ಎಸ್ಡಿಎಂಸಿ ಅಧ್ಯಕ್ಷ ಚನ್ನಬಸವ ಕುಂಬಾರ, ಮಾಜಿ ಗ್ರಾಪಂ ಅಧ್ಯಕ್ಷ ತಿರುಪತಿ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹನುಮಂತ್ರಾಯ ಶಾಖೆ, ಗ್ರಾಪಂ ಸದಸ್ಯರು, ಶಿಕ್ಷಕರಿದ್ದರು. ಶಿಕ್ಷಕ ಭೀಮೋಜಿರಾವ್ ಜಗಪತ್ ಕಾರ್ಯಕ್ರಮ ನಿರೂಪಿಸಿದರು.