ಅರಕೇರಾ: ಬಾಲ ಕಾರ್ಮಿಕ ಪದ್ಧತಿ ಬಡತನ ವರ್ಗಕ್ಕೆ ಅಂಟಿಕೊಂಡ ಅನಿಷ್ಟ ಪದ್ಧತಿಯಾಗಿದೆ. ಮಕ್ಕಳನ್ನುತಪ್ಪದೆ ಶಾಲೆಗೆ ಕಳುಹಿಸಿ ಎಂದು ಶೃತಿ ಸಂಸ್ಕೃತಿ ಸಂಸ್ಥೆ ತಾಲೂಕು ಸಂಯೋಜಕ ರಾಮಣ್ಣ ಎನ್.ಗಣೇಕಲ್ ಹೇಳಿದರು.
ತಾಲೂಕಿನ ಶಿವಂಗಿ ಗ್ರಾಮದ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು. ಬಾಲಕಾರ್ಮಿಕ ಪದ್ಧತಿ ಮಕ್ಕಳ ಭವಿಷ್ಯವನ್ನು ಹಾಳು ಮಾಡುತ್ತದೆ. ಅಲ್ಲದೆ ಕೆಲಸಕ್ಕೆ ದೂಡುವುದರಿಂದ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯದ ಮೇಲೆ ಅಡ್ಡ ಪರಿಣಾಮ ಬೀರುವ ಸಾಧ್ಯತೆಗಳಿರುತ್ತವೆ ಎಂದರು.
ಸರ್ಕಾರಿ ಪ್ರೌಢ ಶಾಲೆ ಮುಖ್ಯ ಶಿಕ್ಷಕ ಶಿವಜಾತಪ್ಪ ಮಾತನಾಡಿ, 14 ವರ್ಷದೊಳಗಿನ ಮಕ್ಕಳನ್ನು ಕೂಲಿ ಕಾರ್ಮಿಕರಾಗಿ ಬಳಸಿಕೊಳ್ಳಬಾರದು ಎಂದರು.
ಎಸ್ಡಿಎಂಸಿ ಅಧ್ಯಕ್ಷ ನಬಿಸಾಬ, ಶಿಕ್ಷಕ ಗಜೇಂದ್ರ, ಪ್ರಮುಖರಾದ ಮಲ್ಲಯ್ಯ ಖಾನಾಪುರ, ನಬಿ ಟೈಲರ್, ರೇಣುಕಾ, ಸವಿತಾ, ಸುಜಾತಾ ಇತರರಿದ್ದರು.