ಅರಕೇರಾ ಸಮೀಪದ ಹೆಗ್ಗಡದಿನ್ನಿಯಲ್ಲಿ ವೀರಭದ್ರೇಶ್ವರ ಸ್ವಾಮೀಜಿಗಳ ಜಾತ್ರಾ ಮಹೋತ್ಸವದಲ್ಲಿ ಏರ್ಪಡಿಸಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಎ.ರಾಜಶೇಖರ ನಾಯಕ ಮಾತನಾಡಿದರು. 
ಜಿಲ್ಲೆ

ಧರ್ಮ ಕಾರ್ಯಗಳಿಂದ ಶಾಂತಿ ನೆಲೆಸಲಿದೆ

ಶಶಿಧರ ಎಲ್

ಅರಕೇರಾ: ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಗಳನ್ನು ಮಾಡುವ ಮೂಲಕ ಶ್ರೀಮಠ ಜನಮಾನಸದಲ್ಲಿ ನೆಲೆಸಿದೆ ಎಂದು ಆರ್.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಎ.ರಾಜಶೇಖರ ನಾಯಕ ಹೇಳಿದರು.

ಸಮೀಪದ ಹೆಗ್ಗಡದಿನ್ನಿ ಗ್ರಾಮದ ಶ್ರೀ ಸದ್ಗುರು ವೀರಭದ್ರೇಶ್ವರ ಸ್ವಾಮೀಜಿಗಳ ಜಾತ್ರಾ ಮಹೋತ್ಸವದಲ್ಲಿ ಏರ್ಪಡಿಸಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು.
ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಎಂಬ ಹಿರಿಯರ ಮಾತು ಸುಳ್ಳಲ್ಲ. ವೈಯಕ್ತಿಕ ಮದುವೆಯಿಂದ ಸಾಕಷ್ಟು ದುಂದು ವೆಚ್ಚ ಭರಿಸಬೇಕಾಗುತ್ತದೆ. ಸಮಾಜದಲ್ಲಿ ಉತ್ತಮ ಸಂಸ್ಕಾರ ಹಾಗೂ ಸನ್ಮಾರ್ಗದಲ್ಲಿ ಕೊಂಡೊಯ್ಯುವ ಕೆಲಸ ಮಠ-ಮಾನ್ಯಗಳು ಮಾಡುತ್ತಿವೆ. ಧರ್ಮದ ಕಾರ್ಯಗಳು ನಡೆದಲ್ಲಿ ಶಾಂತಿ-ಸುವ್ಯವಸ್ಥೆ ನೆಲೆಸಲಿದೆ ಎಂದರು.

ಪಿಠಾಧಿಪತಿ ಕಲಿಗಣನಾಥ ಸ್ವಾಮೀಜಿ, ಬೆಟ್ಟದಯ್ಯಪ್ಪ ತಾತ, ಆರೋಢ ಅಯ್ಯಪ್ಪ ತಾತ, ವಿದ್ವಾನ್ ನಾಗಲಿಂಗಯ್ಯ ಸ್ವಾಮಿ, ಚರಬಸವ ತಾತ ಇದ್ದರು.