ಜಿಲ್ಲೆ

ಉತ್ತಮ ಬಾಂಧವ್ಯದಿಂದ ಆದಾಯ ವೃದ್ಧಿ

ರೈತರಿಗೆ ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಎ.ರಾಜಶೇಖರ ನಾಯಕ ಸಲಹೆ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಜಾಗೃತಿ

ಅರಕೇರಾ: ರೈತರು ಬ್ಯಾಂಕ್‌ನೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳುವುದರಿಂದ ಆರ್ಥಿಕವಾಗಿ ವೃದ್ಧಿ ಹೊಂದಲು ಸಾಧ್ಯ ಎಂದು ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಎ.ರಾಜಶೇಖರ ನಾಯಕ ಹೇಳಿದರು.

ಪಟ್ಟಣದಲ್ಲಿನ ಅಂಬೇಡ್ಕರ್ ಭವನಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಆಜಾದಿ ಕಾ ಅಮೃತ್ ಮಹೋತ್ಸವದಡಿ ಭಾನುವಾರ ಆಯೋಜಿಸಿದ್ದ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಿಂದಿನ ಕಾಲದಲ್ಲಿ ಸರ್ಕಾರದ ಯೋಜನೆಗಳು ಕೇವಲ ಉಳ್ಳವರಿಗೆ ಎನ್ನುವಂತಿತ್ತು. ಈಗ ಎಲ್ಲ ವರ್ಗದವರಿಗೂ ಯೋಜನೆ ಮುಟ್ಟಿಸಲು ಹಲವು ಕಾನೂನುಗಳಿವೆ. ಬ್ಯಾಂಕ್‌ಗಳು ಸಹ ಜನಸ್ನೇಹಿಯಾಗಬೇಕು. ಉತ್ತಮ ಸ್ಪಂದನೆ ಮತ್ತು ಯೋಜನೆಗಳ ಅರಿವು ಪ್ರತಿಯೊಬ್ಬರಿಗೂ ತಲುಪಿದಾಗ ರೈತರು ಅಭಿವೃದ್ಧಿ ಹೊಂದುತ್ತಾರೆ ಎಂದರು.

ವಿಎಸ್ಸೆಸ್ಸೆನ್ ಅಧ್ಯಕ್ಷ ಕೆ.ನಾಗಪ್ಪ, ಉಪಾಧ್ಯಕ್ಷ ರಂಗಣ್ಣ ಪೂಜಾರಿ, ಆರ್‌ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಅಯ್ಯಳಪ್ಪ, ನಿರ್ದೇಶಕರಾದ ಪರಮೇಶ ಪೂಜಾರಿ, ಮಾನಪ್ಪ, ಕಾರ್ಯದರ್ಶಿ ಶಿವಕುಮಾರ ನಾಯಕ, ಪ್ರಮುಖರಾದ ಚನ್ನವೀರಯ್ಯ ಸ್ವಾಮಿ ಹಿರೇಮಠ, ಭಗವಂತ, ಚಂದಪ್ಪ ನಾಯಕ ಇತರರಿದ್ದರು.