ಜಿಲ್ಲೆ

ರಾಸಾಯನಿಕ ಮುಕ್ತ ಕೃಷಿಗೆ ಐಸಿಐಸಿಐ ಬೆನ್ನೆಲುಬು; ಬಿಇಒ ಆರ್.ಇಂದಿರಾ ಶ್ಲಾಘನೆ

ಮಳೆ ನೀರು ಕೋಯ್ಲು ಘಟಕ ಉದ್ಘಾಟನೆ

ಅರಕೇರಾ: ರೈತರಿಗೆ ಸಮಗ್ರ ಕೃಷಿ ಹಾಗೂ ಸಾವಯುವ ಕೃಷಿ ಬಗ್ಗೆ ತರಬೇತಿ ನೀಡಿ, ರಾಸಾಯನಿಕ ಮುಕ್ತ ಕೃಷಿಗೆ ಐಸಿಐಸಿಐ ಫೌಂಡೇಶನ್ ಬೆನ್ನೆಲುಬಾಗಿ ನಿಂತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಇಂದಿರಾ ಹೇಳಿದರು.

ಸಮೀಪದ ಅಗ್ರಿಕಲ್ಚರ್ ಕಾಲನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಐಸಿಐಸಿಐ ಫೌಂಡೇಷನ್ ನಿರ್ಮಿಸಿಕೊಟ್ಟ ಮಳೆ ನೀರು ಕೋಯ್ಲು ಘಟಕವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು. ಶಾಲೆಯನ್ನು ಹಸಿರುಮಯ ಮಾಡಲು ಪ್ರತಿಯೊಬ್ಬರ ಸಹಕಾರ ಮುಖ್ಯವಾಗಿದೆ. ಈಗ ನಿರ್ಮಿಸಿಕೊಟ್ಟ ಉತ್ತಮ ಪರಿಸರ ಮುಂದಿನ ಪೀಳಿಗೆಗೆ ಲಭಿಸುತ್ತದೆ. ಇರುವ ನೀರನ್ನು ಹರಿಬಿಡದೆ, ಸಂಗ್ರಹಿಸಿ ಸದ್ಭಳಕೆ ಮಾಡುವುದಕ್ಕೆ ಫೌಂಡೇಷನ್ ಉತ್ತಮ ಯೋಜನೆ ರೂಪಿಸಿದೆ ಎಂದರು.

ಫೌಂಡೇಷನ್‌ನ ಅಭಿವೃದ್ಧಿ ಅಧಿಕಾರಿ ನರಸಿಂಹಪ್ಪ ಜಿ. ಮಾತನಾಡಿ, ಕೃಷಿಕರು ಕಡಿಮೆ ಬಂಡವಾಳದಿಂದ ಹೆಚ್ಚು ಆದಾಯ ಗಳಿಸುವುದಕ್ಕೆ ಫೌಂಡೇಷನ್ ಮಾರ್ಗದರ್ಶನ ನೀಡುತ್ತದೆ. ಜತೆಗೆ ಸೌಲಭ್ಯವನ್ನೂ ಕಲ್ಪಿಸಿಕೊಡುತ್ತದೆ ಎಂದರು.