ಅರಕೇರಾ: ಸಂಘಟನೆಯೇ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಕಾರಣ ಎಂದು ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಎ.ರಾಜಶೇಖರ ನಾಯಕ ಹೇಳಿದರು. ಪಟ್ಟಣದಲ್ಲಿ ಜಾಲಹಳ್ಳಿ ಗ್ರಾಪಂನಲ್ಲಿ ಚುನಾಯಿತರಾದ ನೂತನ ಸದಸ್ಯರನ್ನು ಶುಕ್ರವಾರ ಸನ್ಮಾನಿಸಿ ಮಾತನಾಡಿದರು. ನಿಮ್ಮ ನಿಮ್ಮ ವಾರ್ಡ್‌ಗಳಲ್ಲಿನ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವಾಗಬೇಕು. ಗ್ರಾಪಂನಿಂದ ಬರುವ ಅನುದಾನದಲ್ಲಿ ಸೌಕರ್ಯಗಳನ್ನು ಕಲ್ಪಿಸಬೇಕು ಎಂದರು.