ನಾಗಡದಿನ್ನಿಯಲ್ಲಿ ಏರ್ಪಡಿಸಿದ್ದ ಮನೆ ಮನೆಗೆ ಅಂಬೇಡ್ಕರ್ ಕಾರ್ಯಕ್ರಮದಲ್ಲಿ ಹುಲಿಗೆಮ್ಮ ಬಸವರಾಜ ದಂಪತಿಗೆ ಸಂವಿಧಾನದ ಪೀಠಿಕೆ ನೀಡಲಾಯಿತು.ಪ್ರಮುಖರಾದ ಎಮ್.ಆರ್ ಭೇರಿ, ಜೆ.ಶರಣಪ್ಪ ಬಲ್ಲಟಗಿ, ಬಸವರಾಜ ನಾಗಡದಿನ್ನಿ, ಮೋಹನ್ ಬಲ್ಲಿದವ ದೇವದುರ್ಗ, ಮಾಜಿ ಗ್ರಾಪಂ ಸದಸ್ಯ ಭೀಮಣ್ಣ ತಿಪ್ಪಲದಿನ್ನಿ, ರಾಮಣ್ಣ ಬೆಲ್ಲದವರ್, ಪಾಷಾ ದೇವದುರ್ಗ ಇದ್ದರು. 
ಜಿಲ್ಲೆ

ಅಂಬೇಡ್ಕರ್ ಸರ್ವ ಜನಾಂಗದ ಅಭಿವೃದ್ಧಿ ಚಿಂತಕ

ಅರಕೇರಾ: ಸರ್ವ ಸಮುದಾಯದ ಜನರ ಅಭಿವೃದ್ಧಿಗೆ ಡಾ.ಬಿ.ಆರ್. ಅಂಬೇಡ್ಕರ್ ಶ್ರಮಿಸಿದ್ದಾರೆ ಎಂದು ಭೀಮ್ ಆರ್ಮಿ ತಾಲೂಕು ಅಧ್ಯಕ್ಷ ವಿಶ್ವನಾಥ ಬಲ್ಲಿದವ್ ಹೇಳಿದರು.

ತಾಲೂಕಿನ ನಾಗಡದಿನ್ನಿ ಗ್ರಾಮದಲ್ಲಿ ಬಹುಜನ ಸಂಘರ್ಷ ಸಮಿತಿ ಆಯೋಜಿಸಿದ್ದ 95ನೇ ಮನೆ ಮನೆಗೆ ಅಂಬೇಡ್ಕರ್ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಂಗಳವಾರ ಮಾತನಾಡಿದರು.
ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಕ್ಕೆ ಸಂವಿಧಾನ ಬರೆದು ಜನರ ಹಕ್ಕುಗಳನ್ನು ರಕ್ಷಿಸಿಸಿದ್ದಾರೆ. ಅಸಮಾನತೆಯನ್ನು ಪೋಷಿಸುವ ಯಥಾಸ್ಥಿತಿವಾದಿಗಳಾದ ಮನುವಾದಿಗಳ ವಿರುದ್ಧ ನಿರಂತರವಾಗಿ ಹೋರಾಡಿದ್ದಾರೆ. ಮನುಷ್ಯರೆಲ್ಲರೂ ಒಂದೇ ಎಂದು ಸಾರುವ ಮೂಲಕ ಸಮಾನತೆಯಿಂದ ಬದುಕುವ ಹಕ್ಕುಗಳನ್ನು ಕಲ್ಪಿಸಿಕೊಟ್ಟವರು ಡಾ.ಬಿ.ಆರ್.ಅಂಬೇಡ್ಕರ್ ಎಂದರು.

ದಸಂಸ ಹೋರಾಟಗಾರ ಎಮ್.ಆರ್ ಭೇರಿ ಮಾತನಾಡಿ, ಶೇ.92 ಜನಸಂಖ್ಯೆಯ ಶೂದ್ರರಿಗೆ ಮನುಧರ್ಮ ಶಾಸ್ತ್ರದ ಮೂಲಕ ಅಕ್ಷರ, ಅನ್ನ, ಅರಿವು ಪಡೆಯುವ ಸ್ವಾತಂತ್ರ್ಯ ನಿಷೇಧಿಸಲಾಗಿತ್ತು. ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನ ಬರೆದು ಕಾನೂನು ಮಾಡುವ ಮೂಲಕ ಶೋಷಿತ ವರ್ಗಕ್ಕೆ ಪುನಃ ಅಧಿಕಾರ ದೊರಕಿಸಿಕೊಟ್ಟಿದ್ದಾರೆ ಎಂದರು.

ಪ್ರಾಸ್ತಾವಿಕವಾಗಿ ಬಹುಜನ ಸಂಘರ್ಷ ಸಮಿತಿ ಅಧ್ಯಕ್ಷ ಜೆ.ಶರಣಪ್ಪ ಬಲ್ಲಟಗಿ ಮಾತನಾಡಿದರು. ಬಹುಜನ ಸಂಘರ್ಷ ಸಮಿತಿ ಸದಸ್ಯ ಬಸವಾರಾಜ ನಾಗಡದಿನ್ನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಭೀಮ್ ಆರ್ಮಿ ರಾಯಚೂರು ಜಿಲ್ಲಾ ಉಪಾಧ್ಯಕ್ಷ ಮೋಹನ್ ಬಲ್ಲಿದವ ದೇವದುರ್ಗ, ಮಾಜಿ ಗ್ರಾಪಂ ಸದಸ್ಯ ಭೀಮಣ್ಣ ತಿಪ್ಪಲದಿನ್ನಿ, ರಾಮಣ್ಣ ಬೆಲ್ಲದವರ್, ಪಾಷಾ ದೇವದುರ್ಗ, ಮರಿಯಪ್ಪ ನಾಗಡದಿನ್ನಿ, ಅಂಬಣ್ಣ ನಾಗಡದಿನ್ನಿ, ಪ್ರಕಾಶ್, ಹನುಮಂತ ತಿಪ್ಪಲದಿನ್ನಿ, ಪ್ರವೀಣ್, ನಿಂಗರಾಜ, ಅರುಣಕುಮಾರ್, ಯಲ್ಲಮ್ಮ, ರೇಣುಕಮ್ಮ, ನರಸಮ್ಮ, ತಾಯಮ್ಮ ನಾಗಡದಿನ್ನಿ ಇತರರಿದ್ದರು.